ಪುತ್ತಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ಗುದ್ದಲಿ ಪೂಜೆ

ಪುತ್ತಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ


ಮೂಡುಬಿದಿರೆ: ಕಲ್ಲಮುಂಡ್ಕೂರು-ಪಾಲಡ್ಕ-ಮಿತ್ತಬೈಲು ಸಂಪಕ೯ ಕಲ್ಪಿಸುವ ರಸ್ತೆಯ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ವಿಠೋಬ ರುಕುಮಾಯಿ ದೇವಳ ಪರಿಸರದಲ್ಲಿ 5.5 ಮೀ ಅಗಲಕ್ಕೆ ವಿಸ್ತರಿಸಿಕೊಂಡು 1ಕಿ.ಮೀ ಉದ್ದದ ರಸ್ತೆಗೆ ರೂ. 1.5 ಕೋ. ವೆಚ್ಚದಲ್ಲಿ ನಡೆಸಲಾಗುವ ಡಾಮರೀಕರಣ ಕಾಮಗಾರಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಗುದ್ದಲಿ ಪೂಜೆ ನೆರವೇರಿಸಿದರು.

ಪುತ್ತಿಗೆ ಪಂ. ಮಾಜಿ ಅಧ್ಯಕ್ಷ ಶಶಿಧರ ಪಿ.ನಾಯಕ್, ಪುತ್ತಿಗೆ ನೆಲ್ಲಿಗುಡ್ಡೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಶೆಟ್ಟಿ, ಮಾಜಿ ಅಧ್ಯಕ್ಷ ಕಿಶೋರ್, ಪಂ. ಮಾಜಿ ಸದಸ್ಯರಾದ ನಾಗರಾಜ ಕರ್ಕೇರ, ಶಶಿಧರ ಅಂಚನ್,  ವಿಠೋಬ ರಕುಮಾಯಿ ದೇವಳದ ಆಡಳಿತ ಮಂಡಳಿಯ ಸದಸ್ಯ ರಮೇಶ ಭಟ್, ರಾಘವ ಭಟ್, ಪ್ರಮುಖರಾದ ಅಶೋಕ ಹೆಗ್ಡೆ ಕೊಡ್ಯಡ್ಕ, ನಾಗೇಶ ನಾಯಕ್, ಅಶೋಕ ಪ್ರಭು ಮೊದಲಾದವರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article