ಯಕ್ಷಗಾನ ಅಂತರಂಗವನ್ನು ಅರಳಿಸುವ ಕೆಲಸ ಮಾಡುತ್ತದೆ: ಒಡಿಯೂರು ಸ್ವಾಮೀಜಿ
"ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರಸಂಗ ಲೋಕಾರ್ಪಣೆ
ಅವರು ಶ್ರೀ ವಿಷ್ಣುಮೂರ್ತಿ ಯಕ್ಷಾಭಿಮಾನಿ ಬಳಗ ಮಿಜಾರು–ತೋಡಾರು ಹಾಗೂ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇದರ ಸಂಯೋಜನೆಯಲ್ಲಿ ಮಿಜಾರು ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ನಡೆದ ಪೌರಾಣಿಕ ಯಕ್ಷಗಾನ ಪ್ರಸಂಗ "ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ" ಕೃತಿ ಬಿಡುಗಡೆ ಸಮಾರಂಭದಲ್ಲಿ ಆಶೀವ೯ಚನ ನೀಡಿದರು.
ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಕಾಯ೯ಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ ಸಂಸ್ಕೃತಿ ಮನೋರಂಜನೆಗೆ ಸೀಮಿತವಾಗದೆ ಸಂಸ್ಕಾರವನ್ನು ಕಲಿಸಿಕೊಡಬೇಕು ಅದನ್ನು ಯಕ್ಷಗಾನ ಕಲಿಸಿಕೊಡುತ್ತದೆ ಎಂದು ನುಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಯಕ್ಷಗಾನ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಅವರ ಪುತ್ರ ಸದಾಶಿವ ಮಿಜಾರು ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ. ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಟಿ.ಜಿ. ಗುರುಪ್ರಸಾದ್, ಮಿಜಾರು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಅನುವಂಶಿಕ ಅರ್ಚಕರಾದ ದಿನೇಶ್ ಪೆಜತ್ತಾಯ ಪೂಮಾವರಗುತ್ತು , ಮಿಜಾರು ವಿಷ್ಣುಮೂರ್ತಿ ದೇವಸ್ಥಾನ ಅರ್ಚಕ ರಾಘವೇಂದ್ರ ಪೆಜತ್ತಾಯ, ಮರಕಡಗುತ್ತು ಡಾ. ರಂಜಿತ್ ಕುಮಾರ್ ಶೆಟ್ಟಿ, ಮಿಜಾರು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮುಖ್ಯಸ್ಥ ಶಂಕರ ರೈ ಮಿಜಾರುಗುತ್ತು, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕೆಎಂಎಫ್ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ. ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಉದ್ಯಮಿ ಅರುಣ್ ರೈ, ದೋಟ ಹರಿಯಪ್ಪ ಶೆಟ್ಟಿ, ಸತೀಶ್ಚಂದ್ರ ಸಾಲ್ಯನ್ ಹಾಗೂ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ದ.ಕ. ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಕಥಾ ರಚನೆಗಾರ ಮಿಜಾರು ರಮೇಶ್ ಶೆಟ್ಟಿ ಮರಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಕ್ಷದೇವ ಮಿತ್ರಕಲಾ ಮಂಡಳಿ ಅಧ್ಯಕ್ಷ ಎಂ. ದೇವಾನಂದ ಭಟ್ ಅಭಿನಂದನಾ ಭಾಷಣಗೈ ದರು.ರಾಮಚಂದ್ರ ಮಿಜಾರು ಕಾಯ೯ಕ್ರಮ ನಿರೂಪಿಸಿದರು.
ಕೃತಿಯನ್ನು ಆಕಾಶಮಾಗ೯ದಲ್ಲಿ ತಂದ ವಿಷ್ಣುವಿನ ವಾಹನ
ಪ್ರಸಂಗದ ಕಥೆ ರಚನೆಗಾರ ರಮೇಶ್ ಶೆಟ್ಟಿ ಮರಿಯಡ್ಕ ರಚಿಸಿರುವ "ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ" ಕೃತಿಯನ್ನು ಡ್ರೋನ್ ಬಳಕೆ ಮಾಡಿ ವಿಷ್ಣುವಿನ ವಾಹನ ಗರುಡನ ಮೂಲಕ ಆಕಾಶ ಮಾಗ೯ವಾಗಿ ವೇದಿಕೆಯತ್ತ ತರಿಸಿ ವಿಶೇಷವಾಗಿ ಗಮನ ಸೆಳೆಯಿತು.
ಇದಕ್ಕೂ ಮೊದಲು ಮಿಜಾರಿನ ವಿಷ್ಣುಮೂತಿ೯ ದೇವಳದಲ್ಲಿ ಕೃತಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಲಾಯಿತು.

