ಸಮುದಾಯ ಆರೋಗ್ಯ ಅರಿವು ಅಭಿಯಾನ: ಮಾಸಾಚರಣೆ

ಸಮುದಾಯ ಆರೋಗ್ಯ ಅರಿವು ಅಭಿಯಾನ: ಮಾಸಾಚರಣೆ


ಮುಡಿಪು: ವೈಯಕ್ತಿಕ ಸ್ವಚ್ಛತೆ, ಗೃಹ ಸ್ವಚ್ಛತೆ, ಪ್ಲಾಸ್ಟಿಕ್ ಸ್ಯಾನಿಟರಿ ಪ್ಯಾಡ್ ಪ್ಯಾಂಪರ್ಸ್‌ಗಳ ಸಮರ್ಪಕ ನಿರ್ವಹಣೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಮುದಾಯ ಆರೋಗ್ಯ ಅಭಿಯಾನ-2026 ಮಾಸಾಚರಣೆಗೆ ಚಾಲನೆ ನೀಡಲಾಯಿತು.

ಜನ ಶಿಕ್ಷಣ ಟ್ರಸ್ಟ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಆರೋಗ್ಯ ಮತ್ತು ಸ್ವಚ್ಛತಾ ಸಮಿತಿ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಸರ್ವೋದಯ ಮಂಟಪದಲ್ಲಿ ಜರಗಿದ ಅರಿವಿನ ಅಭಿಯಾನದ ಮಾಸಾಚರಣೆಯ ಆರಂಭಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ತಡೆದು ಕ್ಯಾನ್ಸರ್‌ನಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಪೂರಕವಾಗಿರುವ ಆರೋಗ್ಯ ಅರಿವು ಅಭಿಯಾನಕ್ಕೆ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಮಾಸಾಚರಣೆ ಅಂಗವಾಗಿ ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ಸಂಜೀವಿನಿ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಶೂನ್ಯ ಕಸ ನಿರ್ವಹಣೆ ಕ್ಯಾನ್ಸರ್ ಜಾಗೃತಿ ಆರೋಗ್ಯ ತಪಾಸಣೆಯೊಂದಿಗೆ ಕ್ಲಸ್ಟರ್ ಮಟ್ಟದಲ್ಲಿ ಕ್ಯಾನ್ಸರ್ ತಪಾಸಣೆ ವಿಶೇಷ ಆರೈಕೆ ಶಿಬಿರವನ್ನು ಹಮ್ಮಿಕೊಳ್ಳುವುದು ಮತ್ತು ಸ್ವಚ್ಚ ಮನೆ ಸ್ವಯಂ ಘೋಷಣೆ ಪತ್ರಗಳ ಪುಸ್ತಕ ಬಿಡುಗಡೆ ಮಾಡವ ಕ್ರಿಯಾ ಯೋಜನೆ ಬಗ್ಗೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾಹಿತಿ ನೀಡಿದರು. 

ಮಾಸಾಚರಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರದ ಬಗ್ಗೆ ಜಿಲ್ಲಾ ಆರೋಗ್ಯ ಸಂಯೋಜಕಿ ತೇಜಸ್ವಿನಿ ಮಾಹಿತಿ ನೀಡಿದರು. ನರಿಂಗಾನ, ಬಾಳೆಪುಣಿ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಜನ ಶಿಕ್ಷಣ ಶಿಕ್ಷಣ ಟ್ರಸ್ಟ್‌ನ ಸಂಯೋಜಕರು, ಕಾರ್ಯಕರ್ತರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article