ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಪನ್ನ

ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಸಂಪನ್ನ


ಸುಬ್ರಮಣ್ಯ: ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31 ರಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಿತು.

ಬೆಳಗ್ಗೆ ಗಣಹೋಮ, ಭಂಡಾರ ಹೊರಡುವುದು, ಶಿವಪೂಜೆ, ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶ ಪೂಜೆ ನಡೆದು ಮದ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

ನಂತರ ಸಂಜೆ ದೀಪಾರಾಧನೆ, ಮಹಾತಂಬಿಲ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಯಕ್ಷಮಣಿ ಗಿರೀಶ್ ಗಡಿಕಲ್ಲು ಅವರ ನಿರ್ದೇಶನದಲ್ಲಿ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ “ರಘುವಂಶ ದೀಪ” ಯಕ್ಷಗಾನ ಬಯಲಾಟ ನಡೆಯಿತು.

ನಂತರ ಶ್ರೀ ದೈವದ ನೇಮೋತ್ಸವವು ಫೆ.01ರ ಮುಂಗಿಜಾನೆಯವರೆಗೆ ನಡೆದು ಬೆಳಿಗ್ಗೆ ಸಂಪ್ರೋಕ್ಷಣೆ ನೆರವೇರುವುದರೊಂದಿಗೆ ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ಸಂಪನ್ನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article