ಮಾನವ-ಹಾವುಗಳ ಸಂವಹನ ತುರ್ತು ಪ್ರತಿಕ್ರಿಯೆ ತರಬೇತಿ ಕಾರ್ಯಗಾರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ‘ನಮ್ಮ ಭವಿಷ್ಯಕ್ಕಾಗಿ ಹಾವುಗಳನ್ನು ರಕ್ಷಿಸೋಣ’ ಎಂಬ ಘೋಷ ವಾಕ್ಯದ ಪ್ರಾಮುಖ್ಯತೆಯನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಂ.ಸಿ ಮಣಿಪಾಲದ ಇ.ಎಮ್.ಟಿ ವಿಭಾಗದ ಡಾ. ಫ್ರೆಸ್ಟರ್ನ್ ಮಾರ್ಕ್ ಶಿರೂರು ಹಾಗೂ ಡಾ.ವೃಂದ ಮಾಹಿತಿ ನೀಡಿದರು. ಕೆ.ಎಂ.ಸಿ ಮಣಿಪಾಲದ ಇ.ಎಮ್.ಟಿ ತಂಡದವರು ವಿವಿಧ ರೀತಿಯ ಪ್ರಾತ್ಯೆಕ್ಷತೆಯ ಮೂಲಕ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಡಿ.ಎಫ್.ಓ ರುತ್ರೇನ್, ಪ್ರೊಬೇಷನರಿ ಎ.ಸಿ.ಎಫ್ ಸುಮಾ, ಅಪಿಡಮೋಲಾಜಿಸ್ಟ್ ಡಾ. ತೇಜಸ್ವಿನಿ, ಮೈಕ್ರೋ ಬೈಲಾಜಿಸ್ಟ್ ಸುಮಾ ಹೆಗ್ದೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಮ್ ಬಿ.ಎಸ್., ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಗಿರೀಶ್ ಕಡ್ಡಿಪುಡಿ, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ಸ್ವಾಗತಿಸಿ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಹೆಚ್ ದೇವರಾಜ್ ವಂದಿಸಿದರು.