ಫೆ.8 ರಂದು ವೇಣೂರು: ಕಲ್ಲುಬಸದಿ ಸಮುಚ್ಛಯದ ಬಸದಿಗಳಲ್ಲಿ ವಾರ್ಷಿಕ ಮಹೋತ್ಸವ
Sunday, February 1, 2026
ಉಜಿರೆ: ವೇಣೂರು ಕಲ್ಲುಬಸದಿ ಸಮುಚ್ಚಯದಲ್ಲಿರುವ ಭಗವಾನ್ ಶಾಂತಿನಾಥಸ್ವಾಮಿ ಬಸದಿ, ಚತುರ್ವಿಂಶತಿ ತೀರ್ಥಂಕರರ ಬಸದಿ ಹಾಗೂ ಆದಿನಾಥಸ್ವಾಮಿ ಬಸದಿಯಲ್ಲಿ ಫೆ.8 ರಂದು ಭಾನುವಾರ ವಾರ್ಷಿಕ ಮಹೋತ್ಸವ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ತಿಳಿಸಿದ್ದಾರೆ.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ವಾರ್ಷಿಕ ಮಹೋತ್ಸವ ನಡೆಯಲಿದೆ.