ನಿಯಮಬಾಹಿರ ಶಾಲಾ ಮಕ್ಕಳ ಪ್ರವಾಸ: ಪ್ರಭಾರ ಮುಖ್ಯ ಶಿಕ್ಷಕ ಅಮಾನತು

ನಿಯಮಬಾಹಿರ ಶಾಲಾ ಮಕ್ಕಳ ಪ್ರವಾಸ: ಪ್ರಭಾರ ಮುಖ್ಯ ಶಿಕ್ಷಕ ಅಮಾನತು

ಉಜಿರೆ: ಫೆ.9ರಂದು ಪಿಕಪ್ ಮತ್ತು ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಶಾಲಾ ಮಕ್ಕಳ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಬಳಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್‌ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ಪ್ರಸಂಗ ವಿಡಿಯೋ ವೈರಲ್ ಅಗಿತ್ತು.

ಫೆ.12 ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬಳಂಜ ಶಾಲೆಗೆ ಭೇಟಿ ನೀಡಿ ಪ್ರಕರಣದ ವರದಿ ಮಾಡಿಕೊಂಡು ಆ ವರದಿಯನ್ನು ಮಂಗಳೂರು ಡಿಡಿಪಿಐ ಶಶಿಧರ್ ಜಿ.ಎಸ್. ಅವರಿಗೆ ಸಲ್ಲಿಸಿದ್ದರು. ಡಿಡಿಪಿಐ ಅವರು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಪ್ರಕರಣದ ಹಿನ್ನೆಲೆಯಲ್ಲಿ  ಫೆ.12 ರಂದು ಮಧ್ಯಾಹ್ನ ವೇಳೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article