ಭಿಡೆ ಸಹೋದರಿಯರು ಸಂಪೂರ್ಣ ಕಲಾವಿದರು: ಚಂದ್ರಶೇಖರ ನಾವಡ

ಭಿಡೆ ಸಹೋದರಿಯರು ಸಂಪೂರ್ಣ ಕಲಾವಿದರು: ಚಂದ್ರಶೇಖರ ನಾವಡ


ಉಜಿರೆ: ಉಜಿರೆಯ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಂಪೂರ್ಣ ಕಲಾವಿದರು. ಅವರಲ್ಲಿ ಎಲ್ಲ ಶಕ್ತಿಯಿದೆ. ಕಲಾವಿದೆಯಾಗಲು ಪೂರಕವಾಗಿ ವಂಚನೆಯಿಲ್ಲದೆ ತನ್ನಲ್ಲಿರುವ ವಿದ್ಯೆಯನ್ನು ಧಾರೆಯೆರೆಯುವವರು ಗುರುಗಳು. ಸುಖವಿರುವಲ್ಲಿ ವಿದ್ಯೆ ಖಂಡಿತ ಬರುವುದಿಲ್ಲ. ವಿದ್ಯೆ ಕರಗತವಾಗಲು ಶ್ರದ್ಧೆ ಮತ್ತು ಭಕ್ತಿ ಬೇಕು. ಗುರುವನ್ನು ಮೀರಿಸುವ ಶಿಷ್ಯ ಬೆಳೆದಾಗ ಮನಸ್ಸು ಅಪ್ಯಾಯಮಾನವಾಗುವುದು. ರಂಗಪ್ರವೇಶದಿಂದ ಭಗವಂತ ಕಲಾವಿದರಲ್ಲಿ ಪ್ರವೇಶವಾಗಿದೆ ಎಂದು  ನಾಟ್ಯಅಂಜಲಿ ಕಲಾ ಅಕಾಡೆಮಿ ನಿರ್ದೇಶಕ ಕಲಾಶ್ರೀ ಗುರು ಚಂದ್ರಶೇಖರ ನಾವಡ ಹೇಳಿದರು.

ಅವರು ಫೆ.21 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಮಂಗಳೂರು ನಾಟ್ಯಾ ರಾಧನಾ ಕಲಾ ಕೇಂದ್ರದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬೆಂಗಳೂರಿನ ಅಭಿನವ ಡಾನ್ಸ್ ಕಂಪನಿ ನಿರ್ದೇಶಕಿ ನಿರುಪಮಾ ರಾಜೇಂದ್ರ ಪ್ರೇಕ್ಷಕನಿಗೆ ಮನೋವಿಕಾಸ ಮಾಡುವ, ಭಗವಂತನಿಗೆ ಇಷ್ಟವಾಗುವ, ಚಿತ್ತಶುದ್ಧಿ ಮಾಡುವ ಭರತನಾಟ್ಯ ಕಲೆ ಭಿಡೆ ಸಹೋದರಿಯರಿಗೆ ಸಿದ್ಧಿಸಿದೆ. ಹೃದಯಸ್ಪರ್ಶಿ ಅನುಭವವಾಗಿ ಹೃದಯ ತುಂಬಿ ಬಂದಿದೆ. ಅವರು ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದು ಅಭಿನಂದಿಸಿದರು.

ಮುಖ್ಯ ಅತಿಥಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಕಲೆಯನ್ನು ಆರಾಧಿಸಿ ದೇವರ ಸ್ಥಾನಕ್ಕೆ  ದೈವತ್ವಕ್ಕೇರಿಸಿ ಆರಾಧಿಸುವವರು ನಾವು. ಸಹೋದರಿಯರಲ್ಲಿ ದೈವತ್ವದ ಅಂಶ ಕಾಣುತ್ತೇವೆ. ಭಿಡೆ ಸಹೋದರಿಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವುದರಲ್ಲಿ ಸಂದೇಹವಿಲ್ಲ. ಶ್ರೇಷ್ಠ ಮಟ್ಟದ ನಮ್ಮೂರಿನ ಪ್ರತಿಭೆಗೆ ಉಜ್ವಲ ಭವಿಷ್ಯವಿದೆ ಎಂದು ಶುಭ ಕೋರಿದರು. 

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿನಂದಿಸಿ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕಗಳಲ್ಲಿ ವಿಶೇಷ ಸಾಧನೆ ಮಾಡಿದವರು. ಅವರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಇಂದ್ರಪ್ರಸ್ಥ ಸಭಾಂಗಣದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬುದು ಹೇಮಾವತಿ ಹೆಗ್ಗಡೆಯವರ ಆಶಯವಾಗಿದೆ ಎಂದು ನುಡಿದರು.

ಕಲಾವಿದೆಯರ ನೃತ್ಯಗುರು ಸುಮಂಗಲಾ ರತ್ನಕರ ರಾವ್ ಪ್ರತಿ ವಿದ್ಯಾರ್ಥಿಯಲ್ಲಿ ಶಿಲ್ಪವನ್ನು ನಿರ್ಮಿಸುತ್ತೇವೆ. ಶಿಲೆಯನ್ನು ಶಿಲ್ಪವನ್ನಾಗಿಸುವ ಭಾಗ್ಯ ದೊರೆತಿದೆ. ಭಿಡೆ ಸಹೋದರಿಯರು ನೃತ್ಯವನ್ನು ಪ್ರೀತಿಸಿದ ಕಾರಣ ಈ ಮಟ್ಟಕ್ಕೆ ಬೆಳೆದಿದ್ದಾರೆ. ಒಳ್ಳೆಯ ಶಿಲೆ ಸಿಕ್ಕಿದ್ದು ದೇವರ ಕೃಪೆ. ಗುರು ಭಕ್ತಿ, ಕಲಾಪ್ರೀತಿ, ಹೆತ್ತವರಿಗೆ ಗೌರವ ಕೊಡುವ ಅವರಿಗೆ ವಿದ್ಯೆ ಮತ್ತು ಸಂಸ್ಕಾರ ನೀಡಿ ಬೆಳೆಸಿದ್ದಾರೆ ಎಂದು ಅಭಿನಂದಿಸಿದರು.

ಕಲಾವಿದರಾದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಮಾತಾಪಿತರಾದ ಚಿತ್ರಾ ಮತ್ತು ಧನಂಜಯ ಭಿಡೆ ಉಪಸ್ಥಿತಿಯಲ್ಲಿ ನೃತ್ಯ ಗುರು ಸುಮಂಗಲಾ ರತ್ನಾಕರ ರಾವ್ ಅವರಿಗೆ ಗುರು ವಂದನೆ ಸಲ್ಲಿಸಿ ಗೌರವಿಸಿದರು.

ಅಭಿನವ ಡಾನ್ಸ್ ಕಂಪನಿಯ ಟಿ.ಡಿ. ರಾಜೇಂದ್ರ ಉಪಸ್ಥಿತರಿದ್ದರು. ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾಶ್ರೀ ರಾಧಾಕೃಷ್ಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಭವಾ ಸಂಕಮಾರ್ ಸ್ವಾಗತಿಸಿ, ಚಿತ್ರಾ ಭಿಡೆ ವಂದಿಸಿದರು. ನಾಟ್ಯಾ ರಾಧನಾ ಕಲಾಕೇಂದ್ರದ ಗುರುಗಳು, ಶಿಷ್ಯವೃಂದ ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಸುಮಂಗಲಾ ರತ್ನಾಕರ ರಾವ್ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರಿಗೆ ನಟರಾಜನ ಪ್ರತಿಮೆ ನೀಡಿ ಗೌರವಿಸಿದರು.

ರಾಮಾಯಣ ದೃಶ್ಯಾವಳಿಯ ನೃತ್ಯ ಸಂಯೋಜನೆಯೊಂದಿಗೆ ರಂಗಪ್ರವೇಶದಲ್ಲಿ ಈರ್ವರು ಸಹೋದರಿಯರು ಭಾವಾಭಿನಯದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು.


ಹೆತ್ತವರು ನಮಗೆ ಕಲೆಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿದ್ದಾರೆ. ಹುಟ್ಟುಹಬ್ಬದ ಕೊಡುಗೆಯಾಗಿ ನಾಟ್ಯಾ ರಾಧನಾ ಕಲಾ ಕೇಂದ್ರಕ್ಕೆ ಸೇರಿಸಿದ್ದಾರೆ. ನಮಗೆ ಧೈರ್ಯ,ಸಮಯಪಾಲನೆ, ಜೀವನ ಮೌಲ್ಯ ತುಂಬಿ ನಮ್ಮ ಬೆಳವಣಿಗೆಗೆ ಪ್ರೇರಣಾದಾಯಿಯಾಗಿದ್ದಾರೆ. -ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article