12 ವರ್ಷಗಳ ಹಿಂದೆ ಶಿಲಾನ್ಯಾಸಗೊಂಡ ಅಬ್ಬಕ್ಕ ಭವನ ನಿರ್ಮಾಣಕ್ಕೆ ಯೋಜನೆಗೆ ಮರುಜೀವ: ಸ್ಪೀಕರ್ ಖಾದರ್‌ರಿಂದ ಸ್ಥಳ ಪರಿಶೀಲನೆ

12 ವರ್ಷಗಳ ಹಿಂದೆ ಶಿಲಾನ್ಯಾಸಗೊಂಡ ಅಬ್ಬಕ್ಕ ಭವನ ನಿರ್ಮಾಣಕ್ಕೆ ಯೋಜನೆಗೆ ಮರುಜೀವ: ಸ್ಪೀಕರ್ ಖಾದರ್‌ರಿಂದ ಸ್ಥಳ ಪರಿಶೀಲನೆ


ಉಳ್ಳಾಲ: 2013ರಲ್ಲಿ ತೊಕ್ಕೊಟ್ಟಿನಲ್ಲಿ ಶಿಲಾನ್ಯಾಸ ಗೊಂಡಿದ್ದ ಅಬ್ಬಕ್ಕ ಭವನ ನಿರ್ಮಾಣದ ದಶಕಗಳ ಯೋಜನೆಗೆ ಮರುಜೀವ ಸಿಕ್ಕಿದೆ.

ಗುರುವಾರ ವಿದಾನಸಭೆಯ ಸಭಾದ್ಯಕ್ಷ ಯು.ಟಿ. ಖಾದರ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದು,ನೂತನ ಕಟ್ಟಡ ನಿರ್ಮಾಣಕ್ಕೆ ಗಡಿ ಗುರುತು ಪ್ರಕ್ರಿಯೆ ನಡೆದಿದೆ.

ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಸ್ಪೀಕರ್ ಖಾದರ್ ಅವರು 2018ರಲ್ಲಿ ನಾನು ಸಚಿವನಾಗಿದ್ದಾಗ ಅಂದಿನ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀಯವರು ಉಳ್ಳಾಲ ತಾಲೂಕಿನ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಎಂಟು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಮಂಜೂರಾಗಿದ್ದ ಈ ಅನುದಾನ ಹಾಗೆಯೇ ಬಾಕಿ ಉಳಿದಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ಜಿಲ್ಲಾಧಿಕಾರಿಗಳ ನಡುವೆ ಮಾತುಕತೆ ನಡೆದ ಬಳಿಕ ಎಲ್ಲಾ ಸಮಸ್ಯೆ ಬಗೆಹರಿದಿದ್ದು, ಇಂದು ಅಬ್ಬಕ್ಕ ಭವನ ನಿರ್ಮಾಣಕ್ಕೆ ಗಡಿ ಗುರುತು ಮಾಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಿದ್ದು,ಕೆಲವೇ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಅಬ್ಬಕ್ಕ ಭವನ ಮತ್ತು ಕೊಣಾಜೆ ಮಂಗಳೂರು ವಿವಿ ಬಳಿಯ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಬ್ಯಾರಿ ಭವನಕ್ಕೂ ಅಧಿಕೃತವಾಗಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಅಬ್ಬಕ್ಕ ಭವನ ನಿರ್ಮಾಣದಿಂದ ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗಬಾರದೆಂಬ ಮುಂಜಾಗ್ರತೆಯಿಂದ ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.ಅಬ್ಬಕ್ಕ ಭವನವನ್ನು ಸುಂದರವಾಗಿ ನಿರ್ಮಿಸುವ ದೃಷ್ಟಿಯಲ್ಲಿ ಪ್ರದೇಶವನ್ನ ಪರಿಶೀಲನೆ ನಡೆಸಲಾಗಿದೆಯೆಂದರು.

ತೊಕ್ಕೊಟ್ಟಿನ ಅಬ್ಬಕ್ಕ ಭವನದ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೂ ಭೂಮಿ ಮಂಜೂರಾಗಿತ್ತು.ಆದರೆ ಅಬ್ಬಕ್ಕ ಭವನದ ಪಕ್ಕದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿವಾದವೇ ಬೇಡವೆಂದು ಮಂಗಳೂರು ವಿಶ್ವ ವಿದ್ಯಾಲಯದ ಬಳಿಯ ವಿಶಾಲ ಜಾಗದಲ್ಲಿ ಬ್ಯಾರಿ ಭವನ ನಿರ್ಮಿಸಲು  ನಿರ್ಧರಿಸಲಾಗಿದೆ. ಅಬ್ಬಕ್ಕ ಭವನದ ಜೊತೆಯಲ್ಲೇ ಬ್ಯಾರಿ ಭವನ ನಿರ್ಮಾಣ ಕಾಮಗಾರಿಗೆ ಸಚಿವ ತಂಗಡಗಿಯವರು ಶೀಘ್ರದಲ್ಲೇ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಸಹನಾ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಮಾಜಿ ತಾ.ಪಂ ಸದಸ್ಯೆ ಸುರೇಖ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಚಂದ್ರಿಕಾ ರೈ ಉಪಸ್ಥಿತರಿದ್ದರು.

2013 ರಲ್ಲಿ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನಕ್ಕೆ ಶಿಲಾನ್ಯಾಸ ನಡೆದಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರು ತೊಕ್ಕೊಟ್ಟಿನ ಕೇಂದ್ರ ಬಸ್ಸು ನಿಲ್ದಾಣದ ಬಳಿಯ ಜಾಗದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.

ಮೂರು ಅಂತಸ್ತಿನ ಕಟ್ಟಡ:

ತೊಕ್ಕೊಟ್ಟುವಿನಲ್ಲಿ ನಿರ್ಮಾಣ ಆಗಲಿರುವ ಅಬ್ಬಕ್ಕ ಭವನವು ಉಳ್ಳಾಲ ತಾಲೂಕಿನ ಮಿನಿ ಟೌನ್ ಹಾಲ್ ಆಗಿ ರಾರಾಜಿಸಲಿದೆ. 41 ಸೆಂಟ್ಸ್ ಜಾಗದಲ್ಲಿ ಮೂರು ಅಂತಸ್ತಿನ ಭವನ ನಿರ್ಮಾಣ ಆಗಲಿದ್ದು, ಅದರಲ್ಲಿ 410 ಆಸನಗಳುಳ್ಳ ಸುಸಜ್ಜಿತ ಸಭಾಂಗಣ,ಗ್ರೀನ್ ರೂಮ್, ಮೀಟಿಂಗ್ ಹಾಲ್, ಅಬ್ಬಕ್ಕಳ ಚರಿತ್ರೆ ಕುರಿತಾದ ಮ್ಯೂಸಿಯಮ್, ಕೆಳ ಅಂತಸ್ತಲ್ಲಿ ಸುಸಜ್ಜಿತ ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಖಾದರ್ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article