ಮನೆಯ ಬೀಗ ಮುರಿದು ನಗ-ನಗದು ದೋಚಿ ಪರಾರಿ

ಮನೆಯ ಬೀಗ ಮುರಿದು ನಗ-ನಗದು ದೋಚಿ ಪರಾರಿ

ಬಂಟ್ವಾಳ: ಕಾವಳಮೂಡೂರು ಗ್ರಾಮದಲ್ಲಿ ಮನೆಮಂದಿ ಬೆಂಗಳೂರಿಗೆ ತೆರಳಿದ್ದಾಗ, ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂ.ನಗದನ್ನು ದೋಚಿ ಪರಾರಿಯಾಗಿದ್ದಾರೆ. 

ಇಲ್ಲಿನ ನಿವಾಸಿ ಇಬ್ರಾಹಿಂ ಕೈಲಾರ್ (50) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ.

ಇಬ್ರಾಹಿಂ ಅವರು ಫೆ. 24ರಂದು ಬೆಳಗ್ಗೆ  ಮಗಳ ಮನೆಗೆಂದು ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಚ ಸುಮಾರು 10 ಪವನಿನ ಚಿನ್ನದ ಹಾರ ಮತ್ತು ಸುಮಾರು 5 ಮುಕ್ಕಾಲು ಪವನ್ ತೂಕದ ಚಿನ್ನದ ನೆಕ್ಲಸ್‌ಗಳನ್ನು ಮನೆಯ ಬೆಡ್ ರೂಮಿನಲ್ಲಿರುವ ಕಪಾಟಿನಲ್ಲಿಟ್ಟಿದ್ದರೆ, ಇನ್ನೊಂದು ಬೆಡ್ ರೂಮಿನ ಕಪಾಟಿನಲ್ಲಿ ಪತ್ನಿಯ ಹ್ಯಾಂಡ್‌ಬ್ಯಾಗಿನಲ್ಲಿ 60 ಸಾವಿರ ರೂ.ನಗದು ಹಣವನ್ನು ಇರಿಸಿ ಮನೆಗೆ ಬೀಗ ಹಾಕಿ ಹೋಗಿದ್ದರು.

ಫೆ.28 ರಂದು ಬೆಳಗ್ಗೆ 11 ಗಂಟೆಗೆ ಕಾವಳಕಟ್ಟೆ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಆನಂದ ಅವರು ಮನೆಗೆ ಅಂಚೆಪತ್ರ ನೀಡಲು ಬಂದಾಗ ಮನೆಯ ಬಾಗಿಲು ಸ್ವಲ್ಪ ತೆರೆದಿದ್ದರಿಂದ ಇಬ್ರಾಹಿಂ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಇಬ್ರಾಹಿಂ ಅವರ ಸೂಚನೆಯ ಮೇರೆಗೆ ಪಕ್ಕದ ಮನೆಯವರು ಆಗಮಿಸಿ ಪರಿಶೀಲಿಸಿದಾಗ ಮನೆಯ ಮುಂಬಾಗಿಲ ಸೆಂಟರ್ ಲಾಕ್ ಮುರಿದಿದ್ದು ಪತ್ತೆಯಾಗಿದೆ. ಇಬ್ರಾಹಿಂ ಅವರು ಸಂಜೆ ಮನೆಗೆ ಬಂದು ನೋಡಿದಾಗ ಚಿನ್ನದ ಒಡವೆಗಳು ಮತ್ತು ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ಚಿನ್ನಾಭರಣದ ಮೌಲ್ಯ 11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಹಾಗೂ 60 ಸಾವಿರ ರೂ. ಹಣ ಕಳವುಗೈಯಲಾಗಿದೆ. ಈ ಬಗ್ಗೆ ಇಬ್ರಾಹಿಂ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article