ಏ.9 ರಂದು ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ, ಹಾೖಗುಳಿ ಹಾಗೂ ಪರಿವಾರ ದೇವಸ್ಥಾನದ 11ನೇ ವರ್ಷದ ವರ್ಧಂತ್ಯೋತ್ಸವ

ಏ.9 ರಂದು ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ, ಹಾೖಗುಳಿ ಹಾಗೂ ಪರಿವಾರ ದೇವಸ್ಥಾನದ 11ನೇ ವರ್ಷದ ವರ್ಧಂತ್ಯೋತ್ಸವ

ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ, ಹಾೖಗುಳಿ ಹಾಗೂ ಪರಿವಾರ ದೇವಸ್ಥಾನದ 11ನೇ ವರ್ಷದ ವರ್ಧಂತ್ಯೋತ್ಸವವು ಏ.9 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.

ಅಂದು ಬೆಳಿಗ್ಗೆ 7ಕ್ಕೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಪ್ರಧಾನ ಹೋಮ, ಬ್ರಹ್ಮಕಲಶ ಸ್ಥಾಪನೆ, ಶ್ರೀ ನಾಗದೇವರಿಗೆ, ಬೊಬ್ಬರ್ಯ, ಹಾೖಗುಳಿ ಹಾಗೂ ಸಪರಿವಾರ ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಲಿರುವುದು.

11 ಗಂಟೆಗೆ ನಾಗಪಾತ್ರಿಗಳಿಂದ ಶ್ರೀ ನಾಗ ದೇವರ ದರ್ಶನ ಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಸೇವಾಕರ್ತರಿಂದ ಸಾರ್ವಜನಿಕ ಮಹಾ "ಅನ್ನ ಸಂತರ್ಪಣೆ" ಕಾರ್ಯಕ್ರಮ ನಡೆಯಲಿರುವುದು.

ಸಂಜೆ 5.30 ರಿಂದ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ವಿಶೇಷ "ರಂಗಪೂಜೆ", ಪ್ರಸಾದ ವಿತರಣೆ ಹಾಗೂ 9ಗಂಟೆಗೆ ಶ್ರೀ ಕ್ಷೇತ್ರ ಸಸಿಹಿತ್ಲು ಮೇಳದವರ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ ಪೂಜಾರಿ ಮೇಲ್ ಹಿತ್ಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article