ಮಲಯಾಳ ಭಾಷಾ ಬಿಲ್ಸ್-2025 ಮರು ಪರಿಶೀಲಿಸಲು ಆದೇಶ ಪತ್ರ

ಮಲಯಾಳ ಭಾಷಾ ಬಿಲ್ಸ್-2025 ಮರು ಪರಿಶೀಲಿಸಲು ಆದೇಶ ಪತ್ರ

ಮಂಗಳೂರು: ಕೇರಳ ಸರಕಾರವು (ಮಲಯಾಳ ಭಾಷಾ ಬಿಲ್ಸ್-2025) ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟಿಸುತ್ತಿದೆ. ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ.

ಭಾಷಾ ಅಲ್ಪಸಂಖ್ಯಾಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ-ಕಾನೂನುಗಳನ್ನು ರೂಪಿಸಬೇಕಾಗುತ್ತದೆ.

ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸಲು ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿರುತ್ತದೆ. ರಾಜ್ಯ ಸರಕಾರಗಳು ರೂಪಿಸುವ ಭಾಷಾ ನೀತಿಗಳು ದೇಶ ರಾಜ್ಯ ಅಥವಾ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ವ ಆಶಯವಾಗಿದೆಯೆಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

ಮಲಯಾಳ ಭಾಷಾ ಬಿಲ್ಸ್-2025 ಪ್ರಕಾರ ಹತ್ತನೇ ತರಗತಿಯವರೆಗೆ ಕೇರಳದ ಎಲ್ಲಾ ಸರಕಾರಿ ಮತ್ತು ಅಂದಾನಿತ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಡ್ಡಾಯ ಮತ್ತು ಪ್ರಥಮ ಭಾಷೆಯಾಗಿದೆ. ಮಲಯಾಳ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯ ಜೊತೆಗೆ ಮಲಯಾಳ ಕಲಿಯಲು ಅವಕಾಶ ನೀಡಲಾಗುವುದೆಂದು ಹೇಳುತ್ತದೆ. ಅಂದರೆ ಕನ್ನಡ ಭಾಷೆಯ ಮಕ್ಕಳು ಮಲಯಾಳ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಕಲಿಯುವುದು ಅಥವಾ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಮೂಲಕ ಮಲಯಾಳ ಭಾಷೆಯನ್ನು ಕಲಿಯಲು ಅವಕಾಶವಿದೆ ಎಂಬ ಗೊಂದಲದಿಂದ ಇದ್ದಾರೆ. 

ಕನ್ನಡ ವಿದ್ಯಾರ್ಥಿಗಳು ತಮ್ಮ ತಾಯಿನುಡಿ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಅವಕಾಶವನ್ನು ಕಸಿಯುವ ಆತಂಕವನ್ನು ಮಲಯಾಳ ಭಾಷಾ ಮಸೂದೆಯಿಂದ ತಿಳಿದು ಬರುತ್ತದೆ. ಇದು ಸಂವಿಧಾನದ ಮೂಲತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಈ ಕುರಿತು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೇಂದ್ರ ಸರಕಾರದ ಸಹಾಯಕ ಭಾಷಾ ಅಲ್ಪ ಸಂಖ್ಯಾಕರ ಆಯುಕ್ತರಿಗೆ ವಿವರವಾದ ಮನವಿ ಪತ್ರವನ್ನು ನೀಡುವ ಮೂಲಕ, ಕೇರಳ ಸರಕಾರಕ್ಕೆ ಮರು ಪರಿಶೀಲಿಸಲು ಪತ್ರ ಬರೆಯುವಂತೆ ಒತ್ತಾಯಿಸಿದರು. ಈ ಕುರಿತು ಕೇಂದ್ರ ಸರಕಾರದ ಭಾಷಾ ಅಲ್ಪ ಸಂಖ್ಯಾಕ ಆಯುಕ್ತರಿಂದ ಮರು ಪರಿಶೀಲಿಸಲು ಆದೇಶಪತ್ರ ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article