ರಥಬೀದಿ ಕಾಲೇಜಿನಲ್ಲಿ ‘ಸರ್ಪಮಿತ್ರ ಜಾಗೃತಿ’ ಕಾರ್ಯಗಾರ

ರಥಬೀದಿ ಕಾಲೇಜಿನಲ್ಲಿ ‘ಸರ್ಪಮಿತ್ರ ಜಾಗೃತಿ’ ಕಾರ್ಯಗಾರ


ಮಂಗಳೂರು: ಇಲ್ಲಿನ ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ, ಯುವ ರೆಡ್‌ಕ್ರಾಸ್ ಘಟಕ ಮತ್ತು ಅಡವಿ ಅಲರ್ಟ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ‘ಸಪ೯ಮಿತ್ರ-ಹಾವು ಕಡಿತ ತಡೆಗಟ್ಟುವಿಕೆ ಮತ್ತು ಜಾಗೃತಿ ಅಭಿಯಾನ’ ಕಾರ್ಯಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಅಡವಿ ಅಲಟ್೯ ಫೌಂಡೇಶನ್ ಸ್ಥಾಪಕ ಸಂರಕ್ಷಣಾ ತಜ್ಞ ಪವನ್ ಜೋಶಿ., ಪ್ರಾಣಿ ಶಾಸ್ತ್ರಜ್ಞ ಕಿರಣ್ ವಾಟಿ ಕೆ. ಮತ್ತು ಔಟ್ ಡೋರ್ ಮೆಡಿಕ್ಸ್ ಫೌಂಡೇಶನ್‌ನ ಡಾ. ನಿಖಿಲ್ ಪೌಲ್ ಆಗಮಿಸಿದ್ದರು.

ಕಾಯ೯ಕ್ರಮದಲ್ಲಿ ‘ಸ್ನೇಕ್ ಆಫ್ ಮೈಸೂರು’ ಪುಸ್ತಕದ ರಚನೆಯ ಕುರಿತು ಡಾಕ್ಯುಮೆಂಟರಿ ಪ್ರದರ್ಶನ, ಹಾವುಗಳ ಪರಿಚಯ, ಹಾವು ಕಡಿತ ತಡೆಗಟ್ಟುವಿಕೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಪ್ರತಿಕ್ರಿಯೆ ಕುರಿತು ಜಾಗೃತಿ ಉಪನ್ಯಾಸ ನಡೆಯಿತು. 

ಕಾರ್ಯಕ್ರಮದ ಅಂತ್ಯದಲ್ಲಿ ಈ ಕುರಿತಾದ ಜಾಗೃತಿ ಪೋಸ್ಟರ್‌ಗಳನ್ನು ಹಾಗೂ ‘ಸ್ನೇಕ್ ಆಫ್ ಮೈಸೂರು’ ಪುಸ್ತಕದ ಪ್ರತಿಗಳನ್ನು ಕಾಲೇಜು ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ., ಯುವ ರೆಡ್‌ಕ್ರಾಸ್, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಗಳ ಸಂಯೋಜಕರು, ಉಪನ್ಯಾಸಕರು ಉಪಸ್ಥಿತರಿದ್ದರು.

ತೃತೀಯ ಬಿ.ಎಸ್ಸಿಯ ವಿದ್ಯಾರ್ಥಿನಿಯರಾದ ಅನನ್ಯ ನಿರೂಪಿಸಿ, ನಯನ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article