ಮಾ.29ರಂದು ಶಿತಾ೯ಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Friday, March 27, 2026
ಮೂಡುಬಿದಿರೆ: ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಕೇಶವ ಸ್ಕೃತಿ ಸಂವರ್ಧನ ಸಮಿತಿ ಮತ್ತು ರಾಷ್ಟ್ರೀಯ ಸೇವಾ ಭಾರತಿ ಕರ್ನಾಟಕ ಆಶ್ರಯದಲ್ಲಿ ಮಾ. 29ರಂದು ಮಂಗಳ ಸ್ವಾಸ್ಥ್ಯ ಸೇವಾ ಯಾತ್ರಾ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆದಿತ್ಯವಾರ ಬೆಳಗ್ಗೆ 9ರಿಂದ 1ರವರೆಗೆ ಅರ್ಜುನಾಪುರ ದೇವಸ್ಥಾನ ವಠಾರ ದಲ್ಲಿ ನಡೆಯಲಿದೆ.
ವೈದ್ಯಕೀಯ ಸೇವೆಗಳು: ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಬಿಎಂಐ ಮೌಲ್ಯಮಾಪನ, ಪೌಷ್ಟಿಕಾಂಶದ ಮೌಲ್ಯಮಾಪನ,
'ಆರೋಗ್ಯ ತಪಾಸಣೆ, ಉಚಿತ ಔಷಧಿಗಳು ಆರೋಗ್ಯ ಶಿಕ್ಷಣ, ವೈದ್ಯಕೀಯ ಶಿಬಿರದ ಸೇವೆಗಳನ್ನು ಶಿಶುಗಳು ಮಕ್ಕಳು, ಕಿಶೋರರು, ಪುರುಷರು, ಮಹಿಳೆಯರು ಮತ್ತು ವೃದ್ದರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.