ವಿವಿಧ ಸಂಘಟನೆಗಳಿಂದ ಪುಚ್ಚಮೊಗರುವಿನಲ್ಲಿ ಬೃಹತ್ ರಕ್ತದಾನ ಶಿಬಿರ
Friday, March 27, 2026
ಮೂಡುಬಿದಿರೆ: ಅಗಲಿದ ಸ್ನೇಹಿತರ ಸ್ಮರಣಾಥ೯ ವಿಶ್ವ ಹಿಂದೂ ಪರಿಷತ್ತ್ ಬಜರಂಗದಳ ಘಟಕ, ಪುಚ್ಚಮೊಗರು ಹಾಗೂ ಫ್ರೆಂಡ್ಸ್ ಪುಚ್ಚೇರಿ ಇವುಗಳ 2ನೇ ವಷ೯ದ ವಾಷಿ೯ಕೋತ್ಸವದ ಸಂದಭ೯ದಲ್ಲಿ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ನ ಸಹಯೋಗದೊಂದಿಗೆ ಪುಚ್ಚಮೊಗರು ಶಾಂತಿರಾಜ್ ಕಾಲೋನಿಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಉದ್ಯಮಿ ರಂಜಿತ್ ಪೂಜಾರಿ ಶಿಬಿರ ಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪುಚಮೊಗರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಶೆಟ್ಟಿ, ಹೊಸಬೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಚೀಂದ್ರ ಎಸ್. ಪೂಜಾರಿ, ಸುರೇಂದ್ರ ಪೂಜಾರಿ, ರಕ್ತದಾನಿ ಪ್ರವೀಣ್ ಅಜು೯ನಾಪುರ, ವಿತೇಶ್ ಶೆಟ್ಟಿ, ಆರ್ಬಿ ಹರೀಶ್ ಪೂಜಾರಿ ಮತ್ತು ಆಳ್ವಾಸ್ ಆಸ್ವತ್ರೆಯ ಸಿಬ್ಬಂದಿ ಗಳು ಉಪಸ್ಥಿತರದ್ದರು.
ರಾತ್ರಿ ಗೆಜೆಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ನಾಗರತಿ ನಡೆಯಿತು ಈ ಸಂದಭ೯ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ
ಮತ್ತು ಮೇಳದ ಸಂಚಾಲಕರು ಹಾಗೂ ಪ್ರಸಂಗ ಕರ್ತರು. ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.
ಅಶೋಕ್ ಕುಮಾರ್ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

