ಸಹಭಾಗಿ ಸಾಮಾಜಿಕ ಸಂಶೋಧನೆ ಇಂದಿನ ಅಗತ್ಯ: ಪ್ರೊ. ಸುನೀತಾ ವಿ.
ಅವರು ರಥಬೀದಿಯ ಡಾ ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಂಶೋಧನಾ ಸಮಿತಿ, ಕಲಾ ಮತ್ತು ಸಮಾಜಕಾರ್ಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬಿ.ಎ., ಬಿ.ಎಸ್.ಡಬ್ಲೂ ಮತ್ತು ಎಂ.ಎಸ್.ಡಬ್ಲೂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಮಾಜ ವಿಜ್ಞಾನ ಸಂಶೋಧನಾ ವಿಧಾನಗಳ ಕುರಿತಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಯನಕಾರ ಸಂಶೋಧನಾ ಪರಿಸರದ ಭಾಗವಾದಾಗ ಸತ್ಯಾಂಶವನ್ನು ಕಾಣಲು ಸಾಧ್ಯ. ಪ್ರಚಲಿತ ವಿದ್ಯಮಾನಗಳನ್ನು ಅರ್ಥಸಿಕೊಳ್ಳಲು ಸೂಕ್ಷ್ಮ ದೃಷ್ಟಿಯ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ವಹಿಸಿದ್ದರು. ಐ.ಕ್ಯೂ.ಎ.ಸಿ. ಸಂಯೋಜಕ ದೇವಿವಿಪ್ರಸಾದ್, ಸಹಸಂಯೋಜಕಿ ಡಾ. ಜ್ಯೋತಿಪ್ರಿಯ, ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ನಿತಿನ್ ಎ. ಚೋಲ್ವೇಕರ್ ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಡಾ. ದುಗ್ಗಪ್ಪ ಕಜೆಕಾರ್ ಸ್ವಾಗತಿಸಿ, ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಅರುಣಾ ಕುಮಾರಿ ವಂದಿಸಿದರು. ಎಂ.ಎಸ್.ಡಬ್ಲೂ ವಿದ್ಯಾರ್ಥಿ ಪುನೀತ್ ನಿರೂಪಿಸಿದರು.