ಜ್ಯೋತಿ ಪಿ. ಅವರಿಗೆ ಪಿಹೆಚ್‌ಡಿ ಪದವಿ
Wednesday, March 25, 2026
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಜ್ಯೋತಿ ಪಿ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಇವರು ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ತ್ರಿವೇಣಿ ಅರಸ್ ಅವರ ಮಾರ್ಗದರ್ಶನದಲ್ಲಿ ‘ತುಳುನಾಡಿನ ಗುತ್ತುಗಳು: ಇತಿಹಾಸ, ಸಂಸ್ಕೃತಿ ಮತ್ತು ಸ್ಥಿತ್ಯಂತರಗಳು’ ಎಂಬ ವಿಷಯವಾಗಿ ಪ್ರಬಂಧ ಮಂಡಿಸಿದ್ದರು.
ಇವರು ಹರೇಕಳ ಮಣಿಬೆಟ್ಟುಗುತ್ತು ಅರುಣ್ ಕುಮಾರ್ ಕಾಜವರವರ ಪತ್ನಿ.