ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ
Thursday, March 26, 2026
ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ಹೋದ ಯುವತಿಯೊರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅರಳ ಗ್ರಾಮದ ಮುಲಾರಪಟ್ನ ನಿವಾಸಿ ಫಾತಿಮತ್ ಇಪ್ರಾ (18) ಕಾಣೆಯಾದ ಯುವತಿ.
ಕಂಪ್ಯೂಟರ್ ತರಬೇತಿ ಹೊಂದಿರುವ ಈಕೆ ಬಿ.ಸಿ. ರೋಡಿನಲ್ಲಿರುವ ಸೈಬರ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು.
ಮಾ.24 ರಂದು ಸೈಬರ್‌ಗೆ ಕೆಲಸಕ್ಕೆಂದು ಹೋದವಳು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.