ಶುದ್ಧ ಷಷ್ಟಿ ಹಿನ್ನೆಲೆ ಕುಕ್ಕೆಯಲ್ಲಿ ಅಧಿಕ ಭಕ್ತರು
Thursday, March 26, 2026
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳು ಬರುವ ಶುದ್ಧ ಷಷ್ಟಿಯಂತೆ ಮಾರ್ಚಿ ತಿಂಗಳ ಈ ದಿನ ಮಂಗಳವಾರ ಶುದ್ಧ ಷಷ್ಟಿ ದಿನವಾದ್ದರಿಂದ ಅಧಿಕ ಸಂಖ್ಯೆಯ ಭಕ್ತರು ಕುಕ್ಕೆಗೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಹಾಗೂ ಸರ್ಪ ಸಂಸ್ಕಾರ ಹಾಗೂ ಇನ್ನಿತರ ಸೇವೆಗಳಲ್ಲಿ ಪಾಲ್ಗೊಂಡರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಲ್ಲಿ ಆಶ್ಲೇಷ ನಕ್ಷತ್ರ ಹಾಗೂ ಶುದ್ಧ ಶಕ್ತಿ ವಿಶೇಷ ದಿನವಾಗಿದ್ದು, ಅಂದು ಹೊರ ಊರು, ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಬಂದು ಸೇವೆಯನ್ನು ಸಲ್ಲಿಸ್ತಾ ಇರುವರು. ಇಂತಹ ವಿಶೇಷ ದಿನಗಳಲ್ಲಿ ಶ್ರೀ ದೇವಳದವರು ಕೂಡ ಭಕ್ತರ ಸುಗಮ ದರ್ಶನ, ಪ್ರಸಾದ ವ್ಯವಸ್ಥೆ ಹಾಗೂ ಭೋಜನ ಪ್ರಸಾದವನ್ನು ನೀಡುವಲ್ಲಿ ವ್ಯವಸ್ಥೆಗಳನ್ನ ಮಾಡಿಕೊಂಡಿರುವರು.

