ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ: ವೈದ್ಯರೊಂದಿಗೆ ದುರಂಕಾರದ ವರ್ತನೆ: ಕ್ರಮಕ್ಕೆ ಸೂಚನೆ

ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ: ವೈದ್ಯರೊಂದಿಗೆ ದುರಂಕಾರದ ವರ್ತನೆ: ಕ್ರಮಕ್ಕೆ ಸೂಚನೆ

ಮೂಡುಬಿದಿರೆ : ತಾಲೂಕಿನ ವಾಣಿಜ್ಯ ಕಟ್ಟಡದಲ್ಲಿರುವ ಶಾಂತಿ ಪ್ರಸಾದ್ ಎಂಬ ವ್ಯಕ್ತಿ ತನ್ನ ವಾಹನವನ್ನು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಸ್ಪತ್ರೆ ಎದುರಿಗೆ ಪಾಕಿಂ೯ಗ್  ಮಾಡಿ ಹೋಗುತ್ತಿದ್ದು, ಸದರಿ ಸ್ಥಳದಲ್ಲಿ NO-Parking, ಹೊರಗಿನ ಖಾಸಗಿ ವಾಹನ ನಿಲ್ಲಿಸಲು ನಿಷೇಧಿಸಲಾಗಿದೆ ಎಂಬುದಾಗಿ ಬೋರ್ಡ್ ಇದ್ದರೂ, ಸದರಿ ವ್ಯಕ್ತಿ ದುರಂಕಾರದಿಂದ ವರ್ತಿಸುತ್ತಾನೆ. 

ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ದರ್ಪದಿಂದ ಮಾತಾಡುತ್ತಾನೆ. ಇದರಿಂದ ಸರಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆದುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಾಗೂ KA-19 MB 9811 ಸದ್ರಿ ವಾಹನಗಳನ್ನು ಪೊಲೀಸ್ ಇಲಾಖೆಯಿಂದ ಸೀಜ್ ಮಾಡಲು ಆದೇಶ ನೀಡಬೇಕಾಗಿ ಕೆಪಿಸಿಸಿ ವಕೀಲರು ಹಾಗೂ ಸಂಯೋಜಕರಾದ ಪದ್ಮರಾಜ್ ಜೈನ್ ಅವರ ಮನವಿಯನ್ನು ಆರೋಗ್ಯ ಸಚಿವರು ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಫೆ.14ರಂದು  ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಲಿಸಿರುತ್ತಾರೆ. ಅದರಂತೆ ಉಸ್ತುವಾರಿ ಸಚಿವರು ಕ್ರಮವಹಿಸುವಂತೆ ಉಲ್ಲೇಖಿತದಲ್ಲಿ ಸೂಚಿಸಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article