ಜೋಗೊಟ್ಟು ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ "ನವನೀತ" ಲೋಕಾಪ೯ಣೆ
ಜೋಗೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಸ್ಥಳದಾನಿ ಬ್ರಹ್ಮಶ್ರೀ ಕೆ. ಹರಿಪ್ರಸಾದ್ ಭಟ್ ದಂಪತಿ ಸಹಿತ, ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಅವರನ್ನು, ಕಟ್ಟಡದ ಗುತ್ತಿಗೆದಾರ ಫೆಡ್ರಿಕ್ ಪಿಂಟೋ, ವಾಲ್ಪಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುತ್ತಿರುವ ಮೇರಿ ಪಿಂಟೋ, ಫೆಲಿಕ್ಸ್ ಪಿಂಟೋ, ಚಿನ್ನಯ್ಯ ಅವರನ್ನು ಗೌರವಿಸಲಾಯಿತು. ದೇಣಿಗೆ ನೀಡಿದವರನ್ನು ಗುರುತಿಸಲಾಯಿತು.
ದ.ಕ. ಹಾಲು ಒಕ್ಕೂಟದ ನಿದೇ೯ಶಕರುಗಳಾದ ಸವಿತಾ. ಎನ್. ಶೆಟ್ಟಿ, ನಂದರಾಮ್ ರೈ, ಒಕ್ಕೂಟದ ವ್ಯವಸ್ಥಾಪಕ ನಿದೇ೯ಶಕ ವಿವೇಕ್ ಡಿ., ಶ್ರೀ.ಕ್ಷೇ. ಧ. ಗ್ರಾ. ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಧನಂಜಯ, ವಾಲ್ಪಾಡಿ ಚಂದ್ರನಾಥ ಸ್ವಾಮಿ ಬಸದಿಯ ಅಧ್ಯಕ್ಷ ರತ್ನಕುಮಾರ್ ಶೆಟ್ಟಿ ಪೆರಿಬೆಟ್ಟು, ಶಿತಾ೯ಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಫೆಡ್ರಿಕ್ ಪಿಂಟೋ, ವಾಲ್ಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ದ.ಕ. ಹಾಲು ಉತ್ಪಾದಕರ ಒಕ್ಕೂಟದ ಮೂಡುಬಿದಿರೆ ವಲಯದ ವಿಸ್ತರಣಾಧಿಕಾರಿ ಸುಚಿತ್ರ, ಸಹಾಯಕ ವ್ಯವಸ್ಥಾಪಕಿ ಜಾನೆಟ್ ರೋಜಾರಿಯೋ ಭಾಗವಹಿಸಿದ್ದರು.
ಕಟ್ಟಡ ಸಮಿತಿಯ ಅಧ್ಯಕ್ಷ ಗುಣಪಾಲ ಮುದ್ಯ ಸ್ವಾಗತಿಸಿದರು. ಜೋಗೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಸ್ವಾತಿ ವರದಿ ವಾಚಿಸಿದರು. ರಾಜೇಂದ್ರ ಕುಮಾರ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.



