ಮಾ.16 ರಂದು ಕೇರಳದ ಶ್ರೀ ರಾಮ ನವಮಿ ರಥ ಮೂಡುಬಿದಿರೆಗೆ ಆಗಮನ
Sunday, March 15, 2026
ಮೂಡುಬಿದಿರೆ: ಕೇರಳ ಮಲಪ್ಪರಂನ ಆಂಜನೇಯಾಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಆರನೇ ರಥಯಾತ್ರೆ ಮೂಡುಬಿದಿರೆಗೆ ಮಾ.17ರಂದು ಆಗಮಿಸಲಿದೆ.
ಸಂಜೆ 4ರ ಸಮಯ ಇಲ್ಲಿನ ಅಲಂಗಾರು ಸತ್ಯನಾರಾಯಣ ಕಟ್ಟೆಯ ಬಳಿ ಈ ರಥಯಾತ್ರೆಯನ್ನು ಜೈನ ಮಠದ ಸ್ವಸ್ತಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಆಂಜನೇಯ ಆಶ್ರಮದ ಆಚಾರ್ಯ ಸ್ವಾಮಿ ಹನುಮದ್ ಪಾದಾನಂದ ಸರಸ್ವತಿ ಸ್ವಾಮಿಗಳ ಹಾಗೂ ಇತರ ಸಂತರುಗಳ ದಿವ್ಯ ಉಪಸ್ಥಿತಿಯಲ್ಲಿ ಸಾರ್ವಜನಿಕವಾಗಿ ಸ್ವಾಗತಿಸಲಾಗುವುದು.
ನಂತರ ಜೈನ ಮಠದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿರುವುದಾಗಿ ಶ್ರೀ ರಾಮ ರಥ ಯಾತ್ರೆ ಮೂಡುಬಿದಿರೆಯ ಸಂಚಾಲಕ ಎಂ ದಯಾನಂದ ಪೈ ಅಲಂಗಾರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.