ಬಸ್ಸಿನಲ್ಲಿ ಸಿಕ್ಕಿದ 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾರೀಸುದಾದರಿಗೆ ಒಪ್ಪಿಸಿದ ಬಸ್ ಕಂಡಕ್ಟರ್
Wednesday, March 4, 2026
ಮೂಡುಬಿದಿರೆ: ತಮ್ಮ ಬಸ್ಸಿನಲ್ಲಿ ಸಿಕ್ಕಿದ 3ಲಕ್ಷ ಮೌಲ್ಯದ ಚಿನ್ನದ ಸರವನ್ನು ಬಸ್ ಕಂಡಕ್ಟರ್ ಓವ೯ರು ಜಾರೂಕತೆಯಲ್ಲಿಟ್ಟು ವಾರೀಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ.
ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಪ್ರಮಾಣಿಕತೆ ಮೆರೆದ ವ್ಯಕ್ತಿ.
ರಾಜೇಶ್ ಅವರಿಗೆ ಬಸ್ಸಿನಲ್ಲಿ ಸುಮಾರು 3,00,000 ಬೆಲೆ ಬಾಳುವ ಚಿನ್ನದ ಸರ ಸಿಕ್ಕಿದ್ದು ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡು ಅವರು ಯಾವುದೇ ಲಾಭದ ಆಸೆಗೆ ಒಳಗಾಗದೆ ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿರುತ್ತಾರೆ.
ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುಧೀಕ್ಷಾ ಅವರು ಸೋಮವಾರ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದರು.
ವಾಟ್ಸಫ್ ಮೂಲಕ ಮಾಹಿತಿಯನ್ನು ತಿಳಿದ ಅವರು ತಮ್ಮಲ್ಲಿದ್ದ ಸೂಕ್ತ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದು ಕಂಡಕ್ಟರ್ ಗೆ ಧನ್ಯವಾದವನ್ನು ತಿಳಿಸಿರುತ್ತಾರೆ.
ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗ್ಡೆ ಅವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.