ಅಕ್ರಮ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ: 6 ಜನರ ಬಂಧನ

ಅಕ್ರಮ ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ: 6 ಜನರ ಬಂಧನ

ಮೂಡುಬಿದಿರೆ: ಮೂಡುಬಿದರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ರವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಅಡ್ಡೆಗೆ ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದು 17 ಜೀವಾಂತ ಹುಂಜಗಳನ್ನು ಪಣಕ್ಕಿಟ್ಟಿದ್ದ 1480 ರೂ ಹಣವನ್ನು, ವಶಕ್ಕೆ ಪಡೆದುಕೊಂಡಿದ್ದಾರೆ. 

ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಮುಗಿದ ಬಳಿಕ  ಬುಧವಾರ  ಅಕ್ರಮವಾಗಿ ಕೋಳಿ ಅಂಕವನ್ನು ಆಯೋಜಿಸಿದ್ದು ಬಳಸುವ ಎರಡು ಬಾಲುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದೈವಸ್ದಾನದ ವ್ಯವಸ್ದಾಪನಾ ಸಮಿತಿ ಹಾಗೂ ಅರೋಪಿಗಳ ಮೇಲೆ ಮೂಡಬಿದ್ರೆ ಪೊಲೀಸ್  ಠಾಣಾ ಅ ಕ್ರ 30/2026 ಕಲಂ 189(2), 193 ಜೊತೆಗೆ 190 ಬಿ ಎನ್ ಎಸ್ ಮತ್ತು  87, 93 ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 11(1)(ಟಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article