ಮಾ.20 ರಂದು ಕುಂದಾಪುರ ಹೊನ್ನನಕೇರಿ-ಸಾಲೇರಹಿತ್ಲು ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಮಾ.20 ರಂದು ಕುಂದಾಪುರ ಹೊನ್ನನಕೇರಿ-ಸಾಲೇರಹಿತ್ಲು ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕುಂದಾಪುರ: ಇಲ್ಲಿನ ಪಾರಿಜಾತ ‌ಸರ್ಕಲ್ ಸಮೀಪದ ಹೊನ್ನನಕೇರಿಯಲ್ಲಿರುವ ಸಾಲೇರಹಿತ್ಲು ನಾಗಬನದ 43ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮಾ.20 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಂದು ಬೆಳಗ್ಗೆ 7ಕ್ಕೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಗಣಹೋಮ, ಪ್ರಧಾನ ಹೋಮ, ಕಲಶ ಸ್ಥಾಪನೆ, ಶ್ರೀನಾಗ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿರುವುದು. 

11 ಗಂಟೆಗೆ ಶ್ರೀ ನಾಗದೇವರ ದರ್ಶನ ಸೇವೆ, ಪಲ್ಲಪೂಜೆ, ತೀರ್ಥ-ಪ್ರಸಾದ ವಿತರಣೆ ನಡೆಯಲಿದೆ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾ "ಅನ್ನ ಸಂತರ್ಪಣೆ" ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article