ಉಚಿತ ಹೊಲಿಗೆ ತರಬೇತಿ ಸಮಾರೋಪ
ಯೋಜನಾಧಿಕಾರಿ ಧನಂಜಯ ಅವರು ಭಾಗವಹಿಸಿ ಮಾತನಾಡಿ, ಸ್ವ ಉದ್ಯೋಗ ಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ ಹಾಗೂ ಸ್ವ ಉದ್ಯೋಗ ಘಟಕ ಪ್ರಾರಂಭಿಸಿ ಎಂದರು.
ಯೋಜನೆಯ ಮೂಡುಕೊಣಾಜೆ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಹೆಗ್ಡೆ ಅಧ್ಯಕ್ಷತೆ ಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಿತಾ೯ಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಭಾಗವಹಿಸಿದರು.
ತಾಲೂಕು ಜನಜಾಗೃತಿ ವೇದಿಕೆಯ ಅಲಂಗಾರ್ ವಲಯದ ಸದಸ್ಯರಾದ ಲತಾ ಹೆಗ್ಡೆ, ಜಿಲ್ಲಾ ವಿಮಾ ಸಮನ್ವಯಧಿಕಾರಿ ಹೇಮಲತಾ ಹೆಗ್ಡೆ, ವಲಯದ ಮೇಲ್ವಿಚಾರಕ ಚಂದ್ರಹಾಸ, ಹೊಲಿಗೆ ತರಬೇತಿ ಶಿಕ್ಷಕಿ ಸುಕನ್ಯಾ ಉಪಸ್ಥಿತರಿದ್ದರು.
ಸುಮಾರು 28 ಶಿಬಿರಾ ರ್ಥಿಗಳು ಭಾಗವಹಿಸಿ ತರಬೇತಿ ಪಡೆಕೊಂಡರು.
ಸೇವಾಪ್ರತಿನಿಧಿ ಶಶಿರೇಖಾ ಸ್ವಾಗತಿಸಿದರು. ವೇದಾವತಿ ಹಾಗೂ ತಂಡದವರು ಪ್ರಾಥಿ೯ಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವಿನಯ ವಂದಿಸಿದರು.