ಸಿ.ಎ. ಫೌಂಡೇಶನ್ ಪರೀಕ್ಷೆ ಫಲಿತಾಂಶ: ಆಳ್ವಾಸ್‌ನ 14 ವಿದ್ಯಾರ್ಥಿಗಳು ಉತ್ತೀರ್ಣ
Friday, March 13, 2026
ಮೂಡುಬಿದಿರೆ: ಜನವರಿಯಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಒಟ್ಟು 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮೆರೆದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಭಾಗದಲ್ಲಿ ಶೇಕಡಾ 19.23 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಕಾಲೇಜು ಶೇಕಡಾ 31 ಫಲಿತಾಂಶ ಪಡೆದಿದೆ.
ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ಶ್ರೇಯಾ ಬಂಗೇರ, ಪ್ರೀಶಾ ಎಸ್, ಜೊವಿಟಾ, ಸೀಮಾ, ಸಚನ್, ಪವಿತ್ರಾ, ಸಿಂಚನಾ ಕೆ., ಅನನ್ಯಾ, ಕುಶಲ್, ಶಿಬಾನಿ, ದೇಕಿ, ಪಲ್ಲವಿ ಮುಧೋಲೆ ಮತ್ತು ಆದಿತ್ಯ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.
