ಕೆಪಿಎಸ್ ಮಿಜಾರು ಪ್ರಾಥಮಿಕ ವಿಭಾಗದಲ್ಲಿ ವಿಜ್ಞಾನ ದಿನಾಚರಣೆ

ಕೆಪಿಎಸ್ ಮಿಜಾರು ಪ್ರಾಥಮಿಕ ವಿಭಾಗದಲ್ಲಿ ವಿಜ್ಞಾನ ದಿನಾಚರಣೆ


ಮೂಡುಬಿದಿರೆ: ತಾಲೂಕಿನ ಮಿಜಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. 


ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ ಶಿರೂರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜ್ಞಾನ ದಿನಾಚರಣೆಯ ಮಹತ್ವವನ್ನು ತಿಳಿಸಿದರು.


ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳನ್ನು  ಪ್ರದರ್ಶನಗೊಳಿಸಿದ್ದು ಶಾಲೆಯ ಎಲ್ಲ ವಿದ್ಯಾರ್ಥಿಗಳು ಇದನ್ನು ವೀಕ್ಷಣೆ ಮಾಡಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು.

ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶಿಕ್ಷಕಿಯರಾದ ಗೀತಾ, ಪ್ರೇಮ, ಹೇಮಾವತಿ, ಚೈತ್ರ  ಹಾಗೂ ಅತಿಥಿ ಶಿಕ್ಷಕರು ಹಾಗೂ ಆಳ್ವಾಸ್ ವಿದ್ಯಾರ್ಥಿಗಳು ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article