ಶಿತಾ೯ಡಿ ಮೆಸ್ಕಾಂ ಸಬ್ ಸ್ಟೇಷನ್ ನ ಹೈ ಟೆನ್ಶನ್ ತಂತಿಗಳಿಂದ ಅಪಾಯ

ಶಿತಾ೯ಡಿ ಮೆಸ್ಕಾಂ ಸಬ್ ಸ್ಟೇಷನ್ ನ ಹೈ ಟೆನ್ಶನ್ ತಂತಿಗಳಿಂದ ಅಪಾಯ


ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮೆಸ್ಕಾಂ ಸಬ್ ಸ್ಟೇಷನ್ ಗೆ  ಅಳವಡಿಕೆ ಆಗಿರುವ ಹೈ ಟೆನ್ಶನ್ ನ ತಂತಿಗಳು ಮಾರ್ಪಾಡಿ ಗ್ರಾಮದ ಮರಿಯಾಡಿ  ಆಸುಪಾಸಿನ ಮನೆಗಳವರಿಗೆ ಅಪಾಯವನ್ನು ಸೂಚಿಸಲು ಆರಂಭಿಸಿದೆ.  

ವೈರುಗಳಿಂದ ಬೃಹತ್ ಸ್ಪೋಟದೊಂದಿಗೆ ಬೆಂಕಿ ಉಂಡೆಗಳು ಚೆಲ್ಲಾಪಿಲ್ಲಿ ಆಗಿ ಉದುರಿ ಬೀಳುತ್ತಿದ್ದು, ಆಸುಪಾಸಿನ ಮನೆಗಳವರಲ್ಲಿ ತುಂಬಾ ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಈಗಾಗಲೇ ಸುಮಾರು ಆರು ಬಾರಿ ಇಂತಹ ಸನ್ನಿವೇಶಗಳು ಸೃಷ್ಟಿಯಾಗಿದ್ದು, ಪ್ರತಿ ಬಾರಿಯೂ ಮೆಸ್ಕಾಂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸುವಂತೆ ಕೋರಿಕೊಂಡಿದ್ದರು ಪ್ರಯೋಜನವಾಗಿರಲಿಲ್ಲ.  ಮಂಗಳವಾರ ಮುಂಜಾನೆಯ ಸಮಯ ಮತ್ತೆ ಹೈ ಟೆನ್ಶನ್ ವಯರ್ಗಳಿಂದ ಸ್ಫೋಟದ ಸದ್ದು ಕೇಳಿ ಬೆಂಕಿ ಉಂಡೆಗಳು ಸುತ್ತಮುತ್ತ ಪಸರಿಸಿದ್ದು ಮಾತ್ರವಲ್ಲದೆ ಆಸು ಪಾಸಿನ ಕೆಲವು ಮನೆಗಳ ವಿದ್ಯುತ್ ಮೀಟರ್ ಸುಟ್ಟು ಹೋಗಿದೆ. ಅಲ್ಲದೆ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾಗಿದೆ. 

ಈ ಬಗ್ಗೆ ಈಗಾಗಲೇ ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article