ಮೂಡುಬಿದಿರೆ: ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು
Tuesday, March 3, 2026
ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದಲ್ಲಿ ಸೋಮವಾರ ತೆಂಗಿನಕಾಯಿ ಕೊಯ್ಯುವ ವೇಳೆ ಮರವೇರಿದ್ದ ಕಾರ್ಮಿಕನೊಬ್ಬ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಮಾಂಟ್ರಾಡಿ ಗ್ರಾಮದ ರಮೇಶ್ (38) ಮೃತ ವ್ಯಕ್ತಿ. ಸೋಮವಾರ ಬೆಳಗ್ಗೆ ಮನೆಯೊಂದರ ಆವರಣದಲ್ಲಿ ತೆಂಗಿನ ಮರಕ್ಕೆ ರಮೇಶ್ ತೆಂಗಿನಕಾಯಿ ಕೊಯ್ಯಲು ಮರವೇರಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮವಾಗಿ ತಲೆಗೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.