ಮೂಡುಬಿದಿರೆ: ಕಾಕ೯ಳದಿಂದ ಮೂಡುಬಿದಿರೆ ಕಡೆಗೆ ಕಲ್ಲಂಗಡಿ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಮಿನಿ ಟೆಂಪೋವೊಂದು ಕೆಸರುಗದ್ದೆ ಬಳಿ ರೋಲ್ ಆಗಿ ಮಗುಚಿಬಿದ್ದು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆಗೆ ನಡೆದಿದೆ.
ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.