ಇರುವೈಲು: ನೇಣು ಬಿಗಿದು ಆತ್ಮಹತ್ಯೆ
Sunday, March 29, 2026
ಮೂಡುಬಿದಿರೆ: ಸಾಲಬಾಧೆಯಿಂದ ನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಇರುವೈಲಿನಲ್ಲಿ ಭಾನುವಾರ ನಡೆದಿದೆ.
ಇರುವೈಲು ಗ್ರಾ.ಪಂ. ವ್ಯಾಪ್ತಿಯ ಪೊನೊಟ್ಟು ನಿವಾಸಿ ದಿವಾಕರ ದೇವಾಡಿಗ (48) ಅವರು ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ದಿವಾಕರ ಅವರಿಗೆ ಪತ್ನಿ ಹಾಗೂ ಕಾಲೇಜು ಶಿಕ್ಷಣ ಪಡೆಯುತ್ತಿರುವ ಓವ೯ ಪುತ್ರ ಮತ್ತು ಪುತ್ರಿ ಇದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.