ಶಿತಾ೯ಡಿಯ ಸತೀಶ್ ಆಚಾಯ೯ ನಾಪತ್ತೆ
Monday, March 23, 2026
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಬಳಿಯ ನಿವಾಸಿ ಸತೀಶ್ ಆಚಾರ್ಯ (43) ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತೀಶ್ ಆಚಾರ್ಯ ವಿವಾಹಿತರಾಗಿದ್ದು ಅಳಿಯೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. 20 ನೇ ತಾರೀಕಿನಿಂದ ಮನೆಯಿಂದ ಹೋದವರು ವಾಪಾಸು ಬರಲಿಲ್ಲವೆಂದು ಅವರ ಸಹೋದರ ಸಂತೋಷ್ ಆಚಾರ್ಯ ಅವರು ದೂರು ನೀಡಿದ್ದಾರೆ.
ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.