ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Monday, March 23, 2026
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಕುಂದರ್ ಕುಟುಂಬ ದೈವಸ್ಥಾನ ಚಾವಡಿ ಸಮಿತಿ ಅಳಪೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಬಳಿಕ ಅವರು ಮಾತನಾಡಿ, ಪಡೀಲಿನ ಕುಂದರ್ ಕುಟುಂಬದ ಈ ದೈವಸ್ಥಾನಕ್ಕೆ ಬರುವ ಪ್ರಮುಖ ರಸ್ತೆ ಬಹಳ ಕಿರಿದಾಗಿದ್ದು ಇಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಯ ಅನಿವಾರ್ಯತೆಯಿತ್ತು. ಅದರಂತೆ ಇಂದು ಶಿಲನ್ಯಾಸವಾಗಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಯಲಿದೆ. ಪ್ರತಿ ವರ್ಷ ಇಲ್ಲಿ ಸಂಕ್ರಮಣ ಸಹಿತ ಜಾತ್ರಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಬರುವ ಭಕ್ತರ, ಪರಿಸರದ ನಾಗರಿಕರ ಅನುಕೂಲಕ್ಕಾಗಿ ಈ ವಿಶೇಷ ಕಾಮಗಾರಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಸ್ಥಳೀಯರು ಸಹಕಾರ ನೀಡಿದರೆ ಕಿರಿದಾದ ರಸ್ತೆಯ ಅಗಲೀಕರಣವೂ ಪೂರ್ಣಗೊಳ್ಳಲಿದೆ. ಆ ಮೂಲಕ ತುರ್ತು ಸಂದರ್ಭದ ಜೊತೆಗೆ ಯಾವುದೇ ವೇಳೆಯಲ್ಲಿ ಇಲ್ಲಿನ ನಾಗರಿಕರಿಗೆ ಉಪಯೋಗವಾಗಲಿದೆ ಎಂದರು.
ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ, ವಾರ್ಡ್ ಅಧ್ಯಕ್ಷರಾದ ಹರೀಶ್, ಪ್ರಮುಖರಾದ ಸುಕೇಶ್, ವೀರೇಂದ್ರ, ಮೀನಕ್ಕ, ಜಯಂತ್, ಸುನಿಲ್, ಸತೀಶ್, ಸೇರಿದಂತೆ ಕುಂದರ್ ಕುಟುಂಬಸ್ಥರು ಉಪಸ್ಥಿತರಿದ್ದರು.