ಮಹಾಕವಿ ಹರಿಹರ ಪ್ರಶಸ್ತಿಗೆ ಡಾ.ರಾಮಕೃಷ್ಣ ಶಿರೂರು ಆಯ್ಕೆ
Monday, March 30, 2026
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರನ್ನು ಮಹಾಕವಿ ಹರಿಹರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಣಿಬೆನ್ನೂರಿನ ಜನಪರವಾಣಿ ಸಾಹಿತ್ಯ ಸೌರಭ ಬಳಗದ ಸಂಸ್ಥಾಪಕ ಬಸವರಾಜ ಎಸ್. ಬಾಗೇವಾಡಿ ಮಠ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆಯುವ ಜನಪರವಾಣಿ ಸಾಹಿತ್ಯ ಸೌರಭದ ಸಾಹಿತ್ಯ ಸಂಭ್ರಮ-2026 ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿರುತ್ತಾರೆ.