ಶ್ರೀ ಮಹಾವೀರ ಕಾಲೇಜಿನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ಎಐ ಮತ್ತು ಎಂಎಲ್ ಲ್ಯಾಬ್ ಉದ್ಘಾಟನೆ

ಶ್ರೀ ಮಹಾವೀರ ಕಾಲೇಜಿನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ಎಐ ಮತ್ತು ಎಂಎಲ್ ಲ್ಯಾಬ್ ಉದ್ಘಾಟನೆ


ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಕರ್ಣಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯ ಮೂಲಕ ತಯಾರಾದ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಎಐ ಮತ್ತು ಎಂಎಲ್) ಲ್ಯಾಬನ್ನು ಸೋಮವಾರ ಉದ್ಘಾಟನೆಗೊಂಡಿತು.

ಕರ್ಣಾಟಕ ಬ್ಯಾಂಕ್‌ನ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕರಾದ  ವಿಶ್ವನಾಥ್ ಎಸ್. ಆರ್. ಅವರು ಲ್ಯಾಬ್ ಉದ್ಘಾಟಿಸಿ ಮಾತನಾಡಿ, “ಎಐ ಮತ್ತು ಎಂಎಲ್ ಇಂದಿನ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಾಗಿದ್ದು ಕಾಲೇಜಿನ ಈ ಪ್ರಯೋಗಾಲಯ ವಿದ್ಯಾರ್ಥಿಗಳನ್ನು ಉದ್ಯೋಗಕ್ಷೇತ್ರಕ್ಕೆ ಸಜ್ಜುಗೊಳಿಸುತ್ತದೆ" ಎಂದರು.


ಎಸ್.ಎಂ.ಸಿ ಆಡಳಿತ ಮಂಡಳಿಯ ಅಧ್ಯಕ್ಷ  ಕೆ. ಅಭಯಚಂದ್ರ ಜೈನ್ ಮಾತನಾಡಿ "ನಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ತೋರ್ಪಡಿಸಲು ಮತ್ತು ಪ್ರೋತ್ಸಾಹಿಸಲು ನೆರವಾಗುವ ಈ ಲ್ಯಾಬನ್ನು ಒದಗಿಸಿದ ಕರ್ಣಾಟಕ ಬ್ಯಾಂಕಿಗೆ ಎಸ್‌ಎಂಸಿ ಚಿರ ಋಣಿ" ಎಂದರು.

ಮುಖ್ಯ ಅತಿಥಿಗಳಾಗಿದ್ದ ಕರ್ಣಾಟಕ ಬ್ಯಾಂಕ್ ನ ನಿವೃತ್ತ ಜನರಲ್ ಮ್ಯಾನೇಜರ್  ಚಂದ್ರಶೇಖರ ರಾವ್ ಬಿ. ಅವರು, “ಪ್ರಾಯೋಗಿಕ ಅಧ್ಯಯನ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಾಂತ್ರಿಕ ಜ್ಞಾನವನ್ನು ಗಟ್ಟಿಗೊಳಿಸುತ್ತದೆ" ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ಕರ್ಣಾಟಕ ಬ್ಯಾಂಕ್ ನ ಮಹಾವೀರ ಕಾಲೇಜು ಶಾಖೆಯ ಮ್ಯಾನೇಜರ್ ರಕ್ಷತ್ ಎನ್. ಶೆಟ್ಟಿ, ವಿಶ್ವಸ್ಥ ಮಂಡಳಿ ಸದಸ್ಯರಾದ ಕೆ. ಆರ್ ಪಂಡಿತ್, ರಾಮ್ ಪ್ರಸಾದ್, ಅಬ್ದುಲ್ ಗಪೂರ್, ವೆಂಕಟೇಶ್ ಕಾಮತ್, ಜೆ.ಜೆ. ಪಿಂಟೋ, ಪ್ರೊ. ರಮೇಶ್ ಭಟ್, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಕೀರ್ತಳ, ಉಪಸ್ಥಿತರಿದ್ದರು.

ಈ ಲ್ಯಾಬ್ ಬಿ.ಸಿ.ಎ. (ಎಐ ಮತ್ತು ಎಂಎಲ್) ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು ಪ್ರೋಗ್ರಾಮಿಂಗ್, ಡೇಟಾ ವಿಶ್ಲೇಷಣೆ ಹಾಗೂ ಮೆಷಿನ್ ಲರ್ನಿಂಗ್ ಗಳಲ್ಲಿ ತರಬೇತಿ ಪಡೆಯುವ ಅವಕಾಶವನ್ನು ಒದಗಿಸುತ್ತದೆ.

ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಅನುಶ್ರೀ ಕಾಯ೯ಕ್ರಮ ನಿರೂಪಿಸಿದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಸ್ವಪ್ನ ಸ್ವಾಗತಿಸಿ, ಪ್ರಥಮ ಬಿ.ಸಿ.ಎ ವಿದ್ಯಾರ್ಥಿನಿ ಪ್ರೇಕ್ಷ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article