ಮೆಸ್ಕಾಂ ಗ್ರಾಹಕರ ಜನಸಂಪಕ೯ ಸಭೆ
ಮಂಗಳವಾರ ಮೆಸ್ಕಾಂ ಸಭಾಂಗಣದಲ್ಲಿ ನಡೆದ ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ವಿದ್ಯುತ್ ಗ್ರಾಹಕರ ಜನಸಂಪಕ೯ ಸಭೆಯಲ್ಲಿ ಸಮಸ್ಯೆಗೆ ಉತ್ತರಿಸಿದ ಮೆಸ್ಕಾಂ ಕಾವೂರು ಎ ಇ ಲೋಹಿತ್ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡುವ ಭರವಸೆ, ಸ್ಥಳ ತನಿಖೆ ಮಾಡಿ ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿದರು.
ಶಿತಾ೯ಡಿ ವ್ಯ.ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಎಸ್. 1200 ಚದರದಡಿಯೊಳಗಿನ ಕಟ್ಟಡಗಳಿಗೆ ವಿದ್ಯುತ್ ಸಂಪಕ೯ ನೀಡಲು ಒಕ್ಯುಪೇಶನ್ ಸರ‍್ಟಿಫಿಕೇಟ್ ಬೇಕಿಲ್ಲ ಎಂದು ಸರಕಾರಿ ಆದೇಶ ಇದೆಯಾದರೂ ಮೆಸ್ಕಾಂ ಗ್ರಾ.ಪಂ. ಪ್ರಮಾಣ ಪತ್ರ ಕೇಳುತ್ತಿದೆ, ಗ್ರಾ.ಪಂ. ನವರು 9/11 ಇತ್ಯಾದಿ ವಿಚಾರಿಸುವುದರಿಂದ ಸಮಸ್ಯೆ ಆಗುತ್ತಿದೆ, ಬೇಕಾದರೆ ಸರಕಾರಿ ಆದೇಶ ನೋಡಿ ಎಂದರು. ಆಗ, ಎಇ ಲೋಹಿತ್ ಆದೇಶ ಪ್ರತಿ ತನ್ನಲ್ಲಿದೆ, ಅದರ ಪ್ರಕಾರ ಕ್ರಮಜರಗಿಸೋಣ ಎಂದು ತಿಳಿಸಿದರು.
ಕೋಳಿ ಫಾರಂ, ಹೈನುಗಾರಿಕೆ ಮೊದಲಾದ ಚಟುವಟಿಕೆಗಳ ಕಟ್ಟಡಕ್ಕೆ ವಿದ್ಯುತ್ ಸಂಪಕ೯ ಸಿಗದೆ ಸಮಸ್ಯೆಯಾಗುತ್ತಿದೆ ಎಂದು ಪ್ರವೀಣ್ ಕುಮಾರ್ ಗಮನ ಸೆಳೆದಾಗ ಅದಕ್ಕೆ ಕೃಷಿ ಇಲಾಖೆಯ ಪತ್ರ ಸಾಕು ಎಂದು ಎಇ ಲೋಹಿತ್ ತಿಳಿಸಿದರು.
ಪುರಸಭೆಯ ನಿಗ೯ಮನ ಸದಸ್ಯ ಜೊಸ್ಸಿ ಮಿನೇಜಸ್ ಅವರು ಕರಿಂಜೆ ಕೆರೆ ರಸ್ತೆಬಳಿ ಟಿಸಿ ಅಳವಡಿಸಿದರೆ ಆಲ್ಲಿರುವ 28 ಕೃಷಿ ಪಂಪ್ ಸೆಟ್ ಗಳಿಗೆ ಅನುಕೂಲವಾಗುತ್ತದೆ, ಮನವಿ ಕೊಟ್ಟಾಗಿದೆ ಎಂದಾಗ ಎಇಇ ಮೋಹನ್ ಅವರು ಇದು ಕ್ರಿಯಾಯೋಜನೆಯಲ್ಲಿ ಸೇಪ೯ಡೆಗೊಂಡಿದೆ ಎಂದು ಉತ್ತರಿಸಿದರು.
ಪಂ. ಮಾಜಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸ ಕೂಡ ಈ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೊನ್ನೆಪದವು ಪ್ರಕಾಶ್ ಮಿನೇಜಸ್ ಅವರು ಪುಚ್ಚಮೊಗರು ಜಾಯ್ ಕ್ರಶರ್ ಬಳಿ ಹಳೆ ತಂತಿಗಳನ್ನು ಬದಲಾಯಿಸಿ ಜನ, ಜಾನುವಾರುಗಳಿಗೆ ಆಗಬಹುದಾದ ಸಂಭಾವ್ಯ ಅಪಾಯ ನಿವಾರಿಸಬೇಕಾಗಿದೆ ಎಂದು ಮತ್ತೊಮ್ಮೆ ಮನವಿ ಸಲ್ಲಿಸಿದರು.
ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅಳಿಯೂರು ಅವರು ವಾಲ್ಪಾಡಿಯ ಕೋಂಕೆ ಟಿಸಿಯಿಂದ ನಾರಾಯಣ ಶೆಟ್ಟರ ಮನೆಯತ್ತ ಸಾಗುವ ರಸ್ತೆಯುದ್ದಕ್ಕೂ 50 ವರ್ಷದ ಹಳೆಯದಾದ ವಿದ್ಯುತ್ ತಂತಿಗಳು ತೀರಾ ದುರ‍್ಬಲವಾಗಿದ್ದ ನೇತಾಡುತ್ತಿವೆ, ಅಲ್ಲಲ್ಲಿ ಜೋಡಿಸಿರುವುದೂ ಅಪಾಯಕಾರಿಯಾಗಿವೆ ಎಂದು ಪ್ರಸ್ತಾಪಿಸಿದರು. ಇದರ ಬಗ್ಗೆ ಕ್ರಿಯಾಯೋಜನೆ ಆಗಿದೆ ಎಂದು ಅ
ಧಿಕಾರಿಗಳು ತಿಳಿಸಿದಾಗ, ಮಳೆಗಾಲ ಬರುವ ಮುನ್ನ ಕೆಲಸವಾಗದಿದ್ದರೆ ಜೀವಾಪಾಯ ಸಾಧ್ಯತೆ ಇದೆ ನೋಡಿ ಎಂದು ರುಕ್ಕಯ್ಯ ಎಚ್ಚರಿಸಿದರು.
ಗಂಟಾಲ್ಕಟ್ಟೆಯಲ್ಲಿ ಶ್ರೀಪತಿ ಭಟ್ಟರ ಮನೆ ಬಳಿ, ರಸ್ತೆ ಪಕ್ಕ ದಶಕಗಳ ಹಿಂದೆ ನೆಡಲಾಗಿದ್ದ ಅಶ್ವತ್ಥಗಿಡ ಈಗ ಮರವಾಗಿ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗುವ ಸನ್ನಿವೇಶವಿದೆ ಇದನ್ನು ಗಮನಿಸಿ ಎಂದು ಪತ್ರಕತ೯ ಕೃಷ್ಣಕುಮಾರ್ ವಿನಂತಿಸಿದರು.
ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಬಳಿ ವಿದ್ಯುತ್ ತಂತಿಗಳನ್ನು ಸ್ಪಶಿ೯ಸುವ ಅಪಾಯವಿರುವ ಮರದ ಕೊಂಬೆಗಳನ್ನು ತೆಗೆಯಬೇಕೆಂಬತನ್ನ ಮನವಿ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವೆ ನೆನೆಗುದಿಗೆ ಬಿದ್ದಿದೆ ಎಂದು ಎಫ್ .ಡಿ. ಕೋಸ್ಟ ಪ್ರಸ್ತಾಪಿಸಿದರು. ಇದಕ್ಕೆ ತಕ್ಕ ಕ್ರಮ ಜರಗಿಸುವ ಭರವಸೆಯನ್ನು ಎಇಇ ಮೋಹನ್ ನೀಡಿದರು.
ಫಾರ‍್ಮ್ ಹೌಸ್ ಕಟ್ಟಡಗಳಿಗೆ ತಹಶೀಲ್ದಾರರ ಪತ್ರವಿದ್ದರೂ ವಿದ್ಯುತ್ ಸಂಪರ‍್ಕ ನೀಡಲಾಗದ ಪರಿಸ್ಥಿತಿ ಇರುವ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಪ್ರಶ್ನಿಸಿದಾಗ ಈ ಬಗ್ಗೆ ಮೇಲಧಿಕಾರಿಗಳಿಂದ ಸ್ಪಷ್ಟ ನಿದೇ೯ಶನ ಪಡೆದು ಕ್ರಮವಹಿಸುವುದಾಗಿ ಎಇ ಲೋಹಿತ್ ತಿಳಿಸಿದರು.
ಮೆಸ್ಕಾಂ ಮೂಡುಬಿದಿರೆ ಉಪವಿಭಾಗ ವ್ಯಾಪ್ತಿಯಲ್ಲಿ 57,775 ವಿದ್ಯುತ್ ಸಂಪರ‍್ಕಗಳಿವೆ. ಆದರೆ, ಇಂದಿನ ಜನ ಸಂಪಕ೯ ಸಭೆಯಲ್ಲಿ ಹಾಜರಾತಿ 50-60ರಷ್ಟಿರುವ ಬಗ್ಗೆ ಪತ್ರಕರ್ತ ಧನಂಜಯ ಅವರು ಮಾತನಾಡಿ ಪತ್ರಿಕೆ, ಮಾಧ್ಯಮದವರಿಗೆ ಕನಿಷ್ಟ 3 ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಮುನ್ನಾ ದಿನ ಅಲ್ಲ. ಮಾಹಿತಿ ಗ್ರಾಮಗ್ರಾಮಗಳಿಗೂ ತಲುಪುವಂತಾಗಬೇಕು. 60 ಜನಕ್ಕೂ ಸ್ಥಳಾವಕಾಶ ಇಲ್ಲದ ಈ ಪುಟ್ಟ ಸಭಾಂಗಣ ಬಿಟ್ಟು ಸೂಕ್ತ ಸಭಾಂಗಣದಲ್ಲಿ ಜನಸಂಪಕ೯ ಸಭೆ ನಡೆಸಿದರೆ ಸೂಕ್ತ ಎಂದು ಸಲಹೆ ಇತ್ತರು.
ಈ ಬಗ್ಗೆ ಖಂಡಿತ ಪರಿಶೀಲಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಪಂಚ ಗ್ಯಾರಂಟಿ ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ರೈತ ಮುಖಂಡ ಅಲ್ವಿನ್ ಮಿನೇಜಸ್, ಚಂದ್ರಶೇಖರ ಮೊದಲಾದವರು ಚಚೆ೯ಗಳಲ್ಲಿ ಪಾಲ್ಗೊಂಡಿದ್ದರು.
