ಶ್ರೀ ಮಹಾವೀರ ಕಾಲೇಜಿನಲ್ಲಿ ಮಾಹೆಯ ಸತತ ಮೂರನೇ ವರ್ಷದ ಉದ್ಯೋಗ ಮೇಳ

ಶ್ರೀ ಮಹಾವೀರ ಕಾಲೇಜಿನಲ್ಲಿ ಮಾಹೆಯ ಸತತ ಮೂರನೇ ವರ್ಷದ ಉದ್ಯೋಗ ಮೇಳ


ಮೂಡುಬಿದಿರೆ: ಶ್ರೀ ಮಹಾವೀರಕಾಲೇಜಿನ (ಎಸ್‌ಎಂಸಿ) ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಮೂರನೇ ವರ್ಷದ ವಿಶೇಷ ಉದ್ಯೋಗ ಮೇಳವು ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ಮಾಹೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಸತೀಶ್ ಪೈ ಉದ್ಯೋಗ ಮೇಳವನ್ನು ಉದ್ಘಾಟಿಸಿ "ನಮ್ಮ ಸಹ ಸಂಸ್ಥೆಯಾದ ಎಸ್‌ಎಂಸಿಯ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸಲು ಮಾಹೆ ಸದಾಬದ್ಧ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಮಾತನಾಡಿ 'ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹೆ ನಿರಂತರವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ" ಎಂದರು.

ಈ ಉದ್ಯೋಗ ಮೇಳದ ರೂವಾರಿ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಜಯ್ ಭಟ್" ಎಸ್‌ಎಂಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಮತ್ತು ಅದಕ್ಕೆ ಬೇಕಾದ ಕೌಶಲಗಳನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಗುರಿ" ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ, "ನಮ್ಮ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಧೈರ್ಯದಿಂದ ಎದುರಿಸಲು ಪೂರಕವಾದ ವಿಶೇಷ ತರಬೇತಿಗಳನ್ನು ಪ್ರತಿ ವರ್ಷ ನೀಡುತ್ತೇವೆ" ಎಂದರು.

ಕಾಲೇಜಿನ ಪ್ಲಸ್ಟೆಂಟ್ ಅಧಿಕಾರಿ ಪ್ರೊ. ಸವಿತಾ ಕೋಟ್ಯಾನ್ ಹಾಗೂ ವಿದ್ಯಾರ್ಥಿ ಪ್ರಸ್ಮಂ ಟ್ ಸಂಘದ ವಿದ್ಯಾರ್ಥಿ ಪ್ರತಿನಿಧಿ ಪ್ರತಿಷ್ಠಾ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಶ್ರೀಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು ಹಲವು ವಿದ್ಯಾರ್ಥಿಗಳು ಮಾಹೆಯ ವಿವಿಧ ವಿಭಾಗಗಳಲ್ಲಿ ಆಯ್ಕೆಯಾಗಿ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಗೊಂಡಿದ್ದಾರೆ.

ಅಂತಿಮ ಬಿ.ಕಾಂ, ವಿದ್ಯಾರ್ಥಿನಿ ಮಂದಾರ ಸ್ವಾಗತಿಸಿದರು. ಅಂತಿಮ ಬಿ.ಕಾಂ. ಶ್ರೇಯಾಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿ ಭೂಮಿತ್ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article