ಕೊಡಂಗಲ್ಲು: ಶ್ಯೂನ್ಯ ತ್ಯಾಜ್ಯ ಪರಿಕಲ್ಪನೆಯೊಂದಿಗೆ ಮಾದರಿಯಾಗಿ ನಡೆದ ಬ್ರಹ್ಮಕಲಶೋತ್ಸವ
ಕಳೆದ ಮೂರು ದಿನಗಳಿಂದ ನಡೆದ ವಿವಿಧ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಏಕ ಬಳಕೆಯ ವಸ್ತುಗಳಾದ ಪ್ಯಾಸ್ಟಿಕ್, ಹಾಗೂ ನೀರಿನ ಬಾಟಲ್ ಗಳನ್ನು ಬಳಸಿರಲಿಲ್ಲ.
ವಿವಿಧ ತಿಂಡಿ ತಿನಿಸುಗಳ ಸ್ಟಾಲ್ ಗಳನ್ನು ಹಾಕಿದವರು ಕೂಡಾ ಪ್ಲಾಸ್ಟಿಕ್ ಚೀಲಗಳನ್ನು ಬಳಸಿಲ್ಲ ಅಲ್ಲದೆ ಕಸಗಳನ್ನಃ ಹಾಕಲು ತಮ್ಮ ಸ್ಟಾಲ್ ಗಳ ಬಳಿಯಲ್ಲಿಯೇ ಸೂಕ್ತ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು.
ಊಟದ ವ್ಯವಸ್ಥೆಯಲ್ಲಿ ಹಾಳೆ ತಟ್ಟೆಗಳನ್ನು ಬಳಸಿದರೆ ತ್ಯಾಜ್ಯ ಹೆಚ್ಚಾಗುತ್ತದೆ ಎಂದು ಅರಿತಿದ್ದ ಬ್ರಹ್ಮಕಲಶೋತ್ಸವ ಸಮಿತಿಯವರು ಹಾಳೆ ಪ್ಲೇಟ್ ಗಳನ್ನು ಬಳಸದೆ ಸ್ಟೀಲ್ ಬಟ್ಟಲುಗಳನ್ನು ಮತ್ತು ನೀರು ಕುಡಿಯಲು ಸ್ಟೀಲ್ ತೋಟಗಳನ್ನೇ ಬಳಸಿದ್ದರು.
ಮೂಡುಬಿದಿರೆ ಪುರಸಭೆಯು ಶೂನ್ಯ ತ್ಯಾಜ್ಯದ ಪರಿಕಲ್ಪನೆಯೊಂದಿಗೆ ಕಾಯ೯ಕ್ರಮಗಳನ್ನು ಆಯೋಜಿಸಲು ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು ಇದಕ್ಕೆ ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಸಮಿತಿಯವರು ಸಹಕಾರ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಪುರಸಭೆಯ ಅಧಿಕಾರಿ ವಗ೯ದವರು ಮತ್ತು ಕಮ್ಯುನಿಟಿ ಮೊಬಿಲೈಸರ್ ಗಳ ಮಾಗ೯ದಶ೯ನದೊಂದಿಗೆ ಇದು ಶೂನ್ಯ ತ್ಯಾಜ್ಯದ ಪರಿಕಲ್ಪನೆ ಯಶಸ್ವಿಯಾಯಿತು.