ಇನ್ಸ್ಟಗ್ರಾಮ್‌ನಲ್ಲಿ ಮೆಸೇಜ್: ಆರೋಪಿ ಬಂಧನ

ಇನ್ಸ್ಟಗ್ರಾಮ್‌ನಲ್ಲಿ ಮೆಸೇಜ್: ಆರೋಪಿ ಬಂಧನ


ಉಳ್ಳಾಲ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಕಾಮೆಂಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳ ದೇವಿನಗರ ನಿವಾಸಿ ಶಂಕರ್ ಮಸ್ತಪ್ಪ ಮೊಗೆರ್ (35) ಎಂದು ಗುರುತಿಸಲಾಗಿದೆ.

ಈತ ಸಪೋರ್ಟ್ ಮಾಡಿ ಬಿಆರ್‌ಒ ಉಳ್ಳಾಲ ಮಸ್ಜಿದ್ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡುತ್ತೀನಿ ಎಂದು ಶಂಕರ್ ಎಂಬ ಹೆಸರಿನಲ್ಲಿ ಸುಹಾಸ್ ಶೆಟ್ಟಿ ಎಂಬವರ ಇನ್ಸ್ಟಗ್ರಾಮ್ ಪೋಸ್ಟ್‌ಗೆ ಕಾಮೆಂಟ್  ಮಾಡಿದ್ದ.  

ಇದನ್ನು ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ದೊಡ್ಡ ಮನಿ ಅವರು ಗಮನಿಸಿದ್ದು, ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article