40 ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳವು

40 ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳವು

ಬಂಟ್ವಾಳ: ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿಯ ರಶೀದ್ ಎಂಬುವರ ಮನೆ ನಿರ್ಮಾಣದ ಕೆಲಸಕ್ಕೆಂದು ತಂದಿಟ್ಟಿದ್ದ 40 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಕಳವುಗೈದಿರುವ ಘಟನೆ ನಡೆದಿದೆ.

ಈ ಬಗ್ಗೆ ಚಂದ್ರ ಶೇಖರ್ ಎಂನವರುನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಕೇಸು ದಾಖಲಾಗಿದೆ.

ಎ.15 ರಂದು ಮನೆಯ ಕೆಲಸಕ್ಕೆಂದು 60 ಸೆಂಟ್ರಿಂಗ್ ಶೀಟ್‌ಗಳನ್ನು ತಂದು ಇರಿಸಿದ್ದು ಅಂದು 20 ಶೀಟ್‌ಗಳನ್ನು ಸೆಂಟ್ರಿಂಗ್‌ಗೆ ಬಳಸಿ ಉಳಿದ 40 ಶೀಟ್‌ಗಳನ್ನು ಕೆಲಸ ಮಾಡುವ ಸ್ಥಳದಲ್ಲಿ ಇರಿಸಲಾಗಿದ್ದು, ಎ.16 ಸ್ಥಳಕ್ಕೆ ಬಂದು ಸಂಜೆ ಕೆಲಸ ಮುಗಿಸಿ ಹೋಗುವಾಗ ಶೀಟ್‌ಗಳು ಇರಿಸಿದ ಸ್ಥಳದಲ್ಲಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎ.17 ರಂದು ಕೆಲಸಕ್ಕೆ ಬಂದಾಗ ಸ್ಥಳದಲ್ಲಿ ಶೀಟ್‌ಗಳು ಕಾಣೆಯಾಗಿದೆ. ಯಾರೋ ಕಳ್ಳರು ಕಳವುಗೈದಿರಬೇಕು, ಇದರ ಮೌಲ್ಯ 35 ಸಾ.ರೂ. ಅಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article