ಸಮಾಜದ ಶಾಂತಿಗೆ ಜನತೆಯ ಸಹಕಾರ ಅಗತ್ಯ: ರಾಜೇಶ್ ನಾಯ್ಕ್ ಉಳಿಪಾಡಿ
ಕೆದ್ಲ ಅನುದಾನಿಕ ಹಿರಿಯ ಪ್ರಾಥಮಿಕ ಶಾಲೆಯ ಶತಮಾನ ಸಂಭ್ರಮೋತ್ಸವ
ಭಾನುವಾರ ಬಂಟ್ವಾಳ ತಾಲೂಕಿನ ಅಮ್ಟಾರ್ ಗ್ರಾಮದ ಕೆದ್ಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನ್ನಪೂರ್ಣೇಶ್ವರಿ ಎಜುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಪರಮೇಶ್ವರ ರಾವ್ ವಹಿಸಿದ್ದರು.
ಅತಿಥಿಯಾಗಿದ್ದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ಮಕ್ಕಳ ಕೊರತೆಯಿಂದ ಬಹಳಷ್ಟು ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಶತಮಾನ ಪೂರೈಸಿದ ಶಾಲೆಯನ್ನು ಉಳಿಸುವ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಸುರೇಶ್ ಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಹೆತ್ತವರಿಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ರಸ್ತೆಯನ್ನು ವಿಶೇಷ ಮುತುವರ್ಜಿ ವಹಿಸಿ ಕಾಂಕ್ರೀಟ್ರೀಕರಣಗೊಳಿಸಿ ಅಭಿವೃದ್ಧಿಪಡಿಸಿದ ಶಾಸಕ ರಾಜೇಶ್ ನಾಯಕ್ ಅವರನ್ನು ಗೌರವಿಸಲಾಯಿತು.
ಶತಮಾನ ಸಂಭ್ರಮೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಶಾಲಾಭಿಮಾನಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿ ಶೋಭಾ ಪ್ರಭು ಅನಿಸಿಕೆ ವ್ಯಕ್ತಪಡಿಸಿದರು. ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ. ಶ್ರೀನಿವಾಸ ರಾವ್, ಬಂಟ್ವಾಳ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ್, ಐಆರ್‌ಟಿ ಸುರೇಖಾ, ಕಲ್ಲಡ್ಕ ಕ್ಲಸ್ಟರ್ ಸಿಆರ್‌ಪಿ ಜೋತಿ, ಹಿರಿಯ ವಿದ್ಯಾರ್ಥಿಗಳಾದ ಬಾಬು ಗೌಡ, ವಿಠಲ ರೈ, ಮೋನಪ್ಪ ರೈ, ಶಾರದಾ, ಶಾಲಾ ಸಂಚಾಲಕಿ ಕೆ. ಭಾರತಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯಾವತಿ ಟಿ.ಎಸ್., ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು, ಜಯರಾಮರೈ ಬೋಳಂತೂರು, ಜಿ. ಚೆನ್ನಪ್ಪ ಪೂಜಾರಿ, ಎಂ. ಗೋಪಾಲಗೌಡ, ಲೂಯಿಸ್ ಡಿಸೋಜ, ಕೆ. ಸಲೀಂ, ಕೆ. ಕೃಷ್ಣಮೂರ್ತಿ, ರಾಮ ಜಿ.ಎನ್., ಚಿದಾನಂದ ಪ್ರಭು, ಜಿ. ಕೃಷ್ಣಪ್ಪ ಪೂಜಾರಿ, ಜಯಂತಿ ಬಿ., ಆನಂದ ನಾಯಕ ಪಿ., ವಿದ್ಯಾರ್ಥಿ ನಾಯಕ ಪ್ರಣಿತ್ ರಾವ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ. ಸುಲೈಮಾನ್ ಸ್ವಾಗತಿಸಿ, ಸಮಿತಿಯ ಗೌರವ ಸಲಹೆಗಾರರಾದ ಶಶಿಕಲಾ ಪ್ರಸ್ತಾವನೆಗೈದರು, ಕೋಶಾಧಿಕಾರಿ ಹರೀಶ್ ರಾವ್ ವಂದಿಸಿದರು. ಶ್ರೀಕಾಂತ್ ರಾವ್ ಹಾಗೂ ರಶ್ಮಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.