ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಜಂಟಿ ಸಾಧನೆ!

ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಜಂಟಿ ಸಾಧನೆ!


ಬಂಟ್ವಾಳ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಯಿ ಮತ್ತು ಮಗಳು ಏಕಕಾಲಕ್ಕೆ ಉತ್ತೀರ್ಣಗೊಂಡು ಬಂಟ್ವಾಳ ತಾಲೂಕಿನಲ್ಲಿ ಅಪರೂಪದ ಸಾಧನೆಗೈದು ಗಮನ ಸೆಳೆದಿದ್ದಾರೆ.

ಬಿ.ಸಿ. ರೋಡ್ ಕೈಕಂಬ ನಿವಾಸಿ, ಗೃಹಿಣಿ ನೇತ್ರಾವತಿ ವಿ.ಆರ್. ಅವರು ಪಿಯುಸಿ ಪೂರೈಸಬೇಕೆಂಬ ತಮ್ಮ ಹಳೆಯ ಕನಸನ್ನು ನನಸಾಗಿಸಿಕೊಳ್ಳಲು ಈ ಬಾರಿ ಖಾಸಗಿ ಅಭ್ಯರ್ಥಿಯಾಗಿ ಕಲಾ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ್ದರು. ಮೊದಲ ಪ್ರಯತ್ನದಲ್ಲೇ 257 ಅಂಕಗಳನ್ನು ಗಳಿಸಿ ಉತ್ತೀರ್ಣರಾಗುವ ಮೂಲಕ ಕಲಿಯುವಿಕೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇನ್ನೊಂದೆಡೆ, ಅವರ ಮಗಳಾದ ಹೇಮಶ್ರೀ ಆರ್. ಅವರು ತಾಯಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಯಶಸ್ಸು ದಾಖಲಿಸಿದ್ದಾರೆ. ಬಿ.ಮೂಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹೇಮಶ್ರೀ, ಕಲಾ ವಿಭಾಗದಲ್ಲಿ 562 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ಪತ್ನಿ ಮತ್ತು ಮಗಳ ಈ ಸಾಧನೆಗೆ ಕುಟುಂಬದ ಮುಖ್ಯಸ್ಥ, ನಂದಾವರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಹರ್ಷ ವ್ಯಕ್ತಪಡಿಸಿದ್ದು, ಈ ತಾಯಿ-ಮಗಳ ಜೋಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article