ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ಹಾವಿಗೆ ಹೋಲಿಸಿ ಖರ್ಗೆ ಹೇಳಿಕೆಗೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತೀವ್ರ ಖಂಡನೆ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ಹಾವಿಗೆ ಹೋಲಿಸಿ ಖರ್ಗೆ ಹೇಳಿಕೆಗೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತೀವ್ರ ಖಂಡನೆ


ಬಂಟ್ವಾಳ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಚುನಾವಣಾ ಭಾಷಣವೊಂದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ವಿಷಪೂರಿತ ಹಾವಿಗೆ ಹೋಲಿಸಿ ಅದನ್ನು ಸಾಯುಸುವುದು ಪ್ರತಿಯೋರ್ವರ ಧರ್ಮ ವಾಗಿದೆ ಎಂದು ಹೇಳಿರುವುದನ್ನು ದ.ಕ. ಜಿಲ್ಲಾ ಬಿಜೆಪಿ ಮುಖಂಡ, ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಕಟು ಶಬ್ದಗಳಿಂದ ಖಂಡಿಸಿದ್ದಾರೆ.

ರಾಜಕಾರಣವನ್ನೇ ತನ್ನ ಕಸುಬಾಗಿಸಿಕೊಂಡಿರುವ ಹಿರಿಯ ಕಾಂಗ್ರೆಸಿಗ ಖರ್ಗೆ ಅವರು ನಕಲಿಗಾಂಧಿಗಳ ಕುಟುಂಬವನ್ನು ಮೆಚ್ಚಿಸುವುದಕ್ಕಾಗಿ ಅಲ್ಪಸಂಖ್ಯಾತರೇ ಸೇರಿರುವ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಮುಸಲ್ಮಾನರು ನಮಾಜ್ ಮಾಡುವಾಗ ಅಲ್ಲಿ ಹಾವೊಂದು ಪ್ರತ್ಯಕ್ಷವಾದರೆ, ನಮಾಜನ್ನು ನಿಲ್ಲಿಸಿ ಹಾವನ್ನು ಕೊಲ್ಲಬೇಕೆಂದು ಕುರಾನ್ ಹೇಳಿದೆ. ಅದೇ ರೀತಿ ಈ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೂಡ ಈ ಹಾವಿನ ರೀತಿಯಲ್ಲಿದ್ದು, ಅದನ್ನು ಸಾಯಿಸುವುದು ನಮ್ಮ ಅದ್ಯ ಕರ್ತವ್ಯವಾಗಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಖರ್ಗೆಯವರ ಮೆದುಳಿನ ಮಾನಸಿಕತೆ ಎಂತಹ ದ್ವೇಷಪೂರಿತವಾಗಿದೆ ಎಂಬುದನ್ನು ದೇಶದ ಜನತೆ ಆರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹರಿಕೃಷ್ಣ ಬಂಟ್ವಾಳ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಖರ್ಗೆಯವರ ಈ ಪ್ರಚೋದನಾಕಾರಿ ಭಾಷಣ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿಯು ವ್ಯಾಪಕವಾಗಿ ವೈರಲ್ ಅಗಿದ್ದು, ಖರ್ಗೆಯವರ ಈ ಹೇಳಿಕೆ ಭಾರತದ ಜಾತ್ಯಾತೀತ ನಿಲುವಿಗೆ ಮತ್ತು ಸಂವಿಧಾನ ವಿರೋಧವು ಆಗಿದೆ. ಪ್ರಚೋದನಾಕಾರಿ ಹೇಳಿಕೆಯ ಹಿನ್ನಲೆಯಲ್ಲಿ ಅವರ ವಿರುದ್ಧ ಸೋಮೊಟೋ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಒಂದು ವರ್ಗದ ಓಟಿಗೋಸ್ಕರ ಯಾವುದೇ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯಾಧ್ಯಕ್ಷರೇ ಸಾಭೀತು ಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು ಸೋಲಿನ ಹತಾಶೆಯಿಂದ ಬಿಜೆಪಿಯನ್ನು ಜನರಮುಂದೆ ಎತ್ತಿಕಟ್ಟುವ ಕೆಲಸದಲ್ಲಿ ಮುಂದಾಗಿದ್ದು, ಇವರ ಈ ಪ್ರಚೋದನಕಾರಿ ಹೇಳಿಕೆ ಭವಿಷ್ಯದ ದೃಷ್ಠಿಯಿಂದ ಅತ್ಯಂತ ಮಾರಕವಾಗಿದೆ ಎಂದು ಹರಿಕೃಷ್ಣ ಬಂಟ್ಚಾಳ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆಯಾಚಿಸಬೇಕು, ಬಿಜೆಪಿ ರಾಜ್ಯಾಧ್ಯಕ್ಷರು ತಕ್ಷಣ ಕಾರ್ಯಕಾರಿ ಸಮಿತಿ ಸಭೆ ಕರೆದು ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ತಮ್ಮ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article