ಏ.23 ರಂದು ಕರ್ಕಿ ಶ್ರೀ ಜ್ಞಾನೇಶ್ವರಿ ಮಠದಲ್ಲಿ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ
Friday, April 17, 2026
ಹೊನ್ನಾವರ: ಉ.ಕ. ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಜ್ಞಾನೇಶ್ವರಿ ಮಠದಲ್ಲಿ ಏ.23 ರಂದು ದೈವಜ್ಞ ಬ್ರಾಹ್ಮಣ ಸಮಾಜದ ವಟುಗಳಿಗಾಗಿ ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರೀ ಮಠದಲ್ಲಿ ಉಪನಯನವನ್ನು ಮಾಡಲು ಇಚ್ಛಿಸುವ ಆಸ್ತಕರು ಈ ಕೂಡಲೇ ಕರ್ಕಿ ಮಠವನ್ನು ಸಂಪರ್ಕಿಸಿ, ಅಗತ್ಯ ಮಾಹಿತಿಗಳನ್ನು ಒದಗಿಸಿ ನೊಂದಣಿ ಮಾಡಿಕೊಳ್ಳಬೇಕೆಂದು ಶ್ರೀ ಜ್ಞಾನೇಶ್ವರಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.