ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಗೌರವ

ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಗೌರವ


ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಇವರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಪೂರ್ವಭಾವಿಯಾಗಿ ಸಮಾಜದಲ್ಲಿ ಅವಿರತವಾಗಿ ದುಡಿದು ತನ್ನ ದುಡಿತದಲ್ಲಿಯೇ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಕೋಟ ಹಾಡಿಕೆರೆ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಕಡ್ ಫೌಂಡೇಶನ್ ಸಂಸ್ಥೆಯ ಪ್ರವರ್ತಕ ಕೆ. ಶ್ರೀಕಾಂತ ಶೆಣೈ ಕೋಟ ಅವರ ನೇತೃತ್ವದಲ್ಲಿ ನೆರವೇರಿತು.


ಕಳೆದ 50 ವರ್ಷಗಳಿಂದ ಕೋಟ ಪರಿಸರದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿರುವ ಸುಬ್ರಹ್ಮಣ್ಯ ಬೀಜಾಡಿ ಅವರು, ಕಳೆದ 30 ವರ್ಷಗಳಿಂದ ಮೆಟಡೋರ್ ಡ್ರೈವರ್ ಆಗಿ ಕೆಲಸ ನಿವ್ರಹಿಸುತ್ತಿರುವ ಅನಂತ ಪೂಜಾರಿ, ಕಳೆದ 40 ವರ್ಷಗಳಿಂದ ಆಟೋ ಚಾಲಕರಿಗೆ ಸೇವೆ ನೀಡುತ್ತಿರುವ ವೆಂಕಟೇಶ್ ಪೂಜಾರಿ, ಸುಮಾರು 58 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಟಿ. ಕೃಷ್ಣ ಪೂಜಾರಿ, ಕಳೆದ 40 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೆ. ಅಣ್ಣಯ್ಯ ಮರಕಾಲ ಅವರನ್ನು ಗುರುತಿಸಿ ಗೌರವಿಸಿ ಯುವ ಪೀಳಿಗೆಗೆ ಸ್ಪೂರ್ತಿ ತುಂಬುವ ಕೆಲಸ ನೆರವೇರಿಸಲಾಯಿತು. 


ಈ ಕಾರ್ಯಕ್ರಮದಲ್ಲಿ ಸಕಡ್ ಫೌಂಡೇಷನ್‌ನ ಪ್ರವರ್ತಕ ಶ್ರೀಕಾಂತ ಶೆಣೈ, ಶ್ರೀ ಕ್ಷೇತ್ರ ಹಾಡಿಕೆರೆಯ ಪಾತ್ರಿ ಕೆ. ಭಾಸ್ಕರ್ ಸ್ವಾಮಿ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಹಿರಿಯ ಸಲಹೆಗಾರ ತಿಮ್ಮ ಕಾಂಚನ್, ಜೈಕುಂದಾಪ್ರ ಸೇವಾ ಟ್ರಸ್ಟ್ (ರಿ.) ಹಾಗೂ ಶ್ರೀ ಪುಂಡಲೀಕ ಮೊಗವೀರ ಅಧ್ಯಕ್ಷರು, ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.)ನ ಸಲಹೆಗಾರ ಆದಿತ್ಯ ಉಪಸ್ಥಿತರಿದ್ದರು. 


ಜಯರಾಜ್ ಸಾಲ್ಯಾನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ದಿವ್ಯ ಕುಂದಾಪುರ ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article