ಏಪ್ರಿಲ್ ಮೊದಲ ದಿನವೇ ಬೆಲೆ ಶಾಕ್: LPG ಸಿಲಿಂಡರ್ ದರ ಭಾರಿ ಏರಿಕೆ

ಏಪ್ರಿಲ್ ಮೊದಲ ದಿನವೇ ಬೆಲೆ ಶಾಕ್: LPG ಸಿಲಿಂಡರ್ ದರ ಭಾರಿ ಏರಿಕೆ


ನವದೆಹಲಿ: ದೇಶದ ಜನತೆಗೆ ಹಣಕಾಸು ವರ್ಷದ ಮೊದಲ ದಿನವೇ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಹೋಟೆಲ್‌ಗಳು, ವ್ಯಾಪಾರಸ್ಥರು ಹಾಗೂ ಸಣ್ಣ ಉದ್ಯಮಿಗಳಿಗೆ ಹೆಚ್ಚುವರಿ ಹೊರೆ ಬಿದ್ದಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹195.50 ಹೆಚ್ಚಿಸಿದ್ದು, ಹೊಸ ದರ ₹2078.50ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಮಾರ್ಚ್ 1ರಂದು ₹114.50 ಹೆಚ್ಚಿಸಲಾಗಿತ್ತು. ಅಂದರೆ ಕೇವಲ ಒಂದು ತಿಂಗಳಲ್ಲೇ ಎರಡನೇ ಬಾರಿಗೆ ದರ ಏರಿಕೆಯಾಗಿದೆ.

ಗೃಹಬಳಕೆಯ ಸಿಲಿಂಡರ್ ಬೆಲೆ ಯಥಾಸ್ಥಿತಿ : ಇನ್ನು ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿದ್ದು, ದೆಹಲಿಯಲ್ಲಿ ಇದರ ದರ ₹913 ಆಗಿದೆ. ಕೊನೆಯದಾಗಿ ಮಾರ್ಚ್ 7ರಂದು ₹60 ಹೆಚ್ಚಳ ಮಾಡಲಾಗಿತ್ತು.

5 Kg ಸಣ್ಣ ಸಿಲಿಂಡರ್‌ಗೂ ಬೆಲೆ ಏರಿಕೆ : 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್ ಬೆಲೆಯನ್ನೂ ₹51 ಹೆಚ್ಚಿಸಲಾಗಿದೆ. ಇದರಿಂದ ಚಿಕ್ಕ ವ್ಯಾಪಾರಿಗಳಿಗೆ ಮತ್ತಷ್ಟು ಹೊರೆ ಹೆಚ್ಚಾಗಿದೆ.

ಬೆಲೆ ಏರಿಕೆಯ ಪ್ರಮುಖ ಕಾರಣಗಳು : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ವಿಶೇಷವಾಗಿ ಇರಾನ್–ಅಮೆರಿಕಾ-ಇಸ್ರೇಲ್ ನಡುವಿನ ಉದ್ವಿಗ್ನತೆ ಇಂಧನ ಸರಬರಾಜು ಸರಪಳಿಗೆ ಧಕ್ಕೆಯುಂಟುಮಾಡಿದ್ದು, ತೈಲದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಜಾಗತಿಕ ತೈಲ ದರಗಳು ಸುಮಾರು 50%ರವರೆಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article