SSLC ಪರೀಕ್ಷಾ ಫಲಿತಾಂಶ: ಮಂಗಳೂರು, ಬಂದರಿನ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 4ನೇ ಬಾರಿ 100% ಫಲಿತಾಂಶ
Thursday, April 23, 2026
ಮಂಗಳೂರು: 2026ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಬಂದರು ವಾರ್ಡಿನಲ್ಲಿರುವ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆ ಸತತ 4ನೇ ಬಾರಿ ಶೇಕಡಾ 100 ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಪರೀಕ್ಷೆ ಬರೆದ ಎಲ್ಲಾ 32 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆಯಾದರೆ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರೆ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಅಮೋಘ ಸಾಧನೆ ಮಾಡಲು ಶ್ರಮ ವಹಿಸಿದ ವಿದ್ಯಾರ್ಥಿಗಳು, ಸತತ ಸಾಧನೆ ಮಾಡಲು ಪರಿಶ್ರಮ ಪಟ್ಟ ಶಿಕ್ಷಕ ವೃಂದ ಮತ್ತು ಪೋಷಕರ ಸಹಕಾರ ಮತ್ತು ಮಾರ್ಗದರ್ಶನದಿಂದ ಸತತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಾಲಾ ಸಂಚಾಲಕ ಎಂ. ಶರೀಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.