ರಿಪ್ಪರ್ ಚಂದ್ರನಿಗೆ ಮೃತ್ಯು ಕುಣಿಕೆ ತೊಡಿಸಿದ ಬಾಲಚಂದ್ರ ನಿಗೂಢ ಸಾವು ವಾ ಮಂಜೂರು ಮರ್ಡರ್ ಕೇಸಿನ ಅಸಲಿ ಸಾಕ್ಷಿ ಇನ್ನಿಲ್ಲ

ರಿಪ್ಪರ್ ಚಂದ್ರನಿಗೆ ಮೃತ್ಯು ಕುಣಿಕೆ ತೊಡಿಸಿದ ಬಾಲಚಂದ್ರ ನಿಗೂಢ ಸಾವು ವಾ ಮಂಜೂರು ಮರ್ಡರ್ ಕೇಸಿನ ಅಸಲಿ ಸಾಕ್ಷಿ ಇನ್ನಿಲ್ಲ

ಮಂಗಳೂರು: ಇತಿಹಾಸದ ಪುಟಗಳಲ್ಲಿ ಅಚ್ಚುತ್ತಿರುವ ಆ ಭಯಾನಕ ಕೊಲೆಗಡುಕ ರಿಪ್ಪರ್ ಚಂದ್ರನಿಗೆ ನೇಣಿನ ಕುಣಿಕೆ ಬಿಗಿಯುವಂತೆ ಮಾಡಿದ್ದ ಆ ಕೆಚ್ಚೆದೆಯ ಸಾಕ್ಷಿ ಇಂದು ನಿಧನವಾಗಿದೆ.

1985 ರಲ್ಲಿ ಇಡೀ ಕರಾವಳಿಯನ್ನೇ ನಡಗಿಸಿದ್ದ ವಾಮಂಜೂರಿನ ಅವಳಿ ಕೊಲೆ ಪ್ರಕರಣದ ಏಕೈಕ ಕಣ್ಣಾರೆ ಕಂಡ ಸಾಕ್ಷಿ ಬಾಲಚಂದ್ರ (53) ವಾಮಂಜೂರು ಚೆಕ್ ಪೋಸ್ಟ್ ಬಳಿಯ ತನ್ನ ಮನೆಯಲ್ಲಿ ನಿಗೂಢವಾಗಿ ಹಸುನೆಗಿದ್ದಾರೆ.

ವಿಷಯ ಹಳೆಯದಾದರೂ ಮೈ ನರಗಿಸುತ್ತದೆ ಅಂದು ಕೇವಲ 13 ವರ್ಷದ ಹುಡುಗನಾಗಿದ್ದ ಬಾಲಚಂದ್ರ ಕತ್ತಲ ರಾತ್ರಿಯಲ್ಲಿ ಆ ರಾಕ್ಷಸ ರಿಪ್ಪರ್ ಚಂದ್ರ ತನ್ನ ತಂದೆ ನರಸಪ್ಪಯ್ಯ ಹಂದೆ ಮತ್ತು ಕೆಲಸಗಾರ ವಿಶ್ವನಾಥನ್ ಅವರನ್ನು ಪಿಕಾಶಿಯಿಂದ ಹೊಡೆದು ಸಾಯಿಸುವುದನ್ನು ಕಣ್ಣಾರೆ ಕಂಡಿದ್ದ ಅಷ್ಟೇ ಅಲ್ಲ ತಾಯಿ ಹಿಂದಿನ ಅಂದೆ ಮೇಲಿನ ಭೀಕರ ಹಲ್ಲೆಯನ್ನು ನೋಡಿದ ನ್ಯಾಯಾಲಯದಲ್ಲಿ ಆ ಕಿರತಕನ ಕಣ್ಣಿಗೆ ಕಣ್ಣಿಟ್ಟು ಈತ ನುಡಿದ ಸಾಕ್ಷಿ 1991ರಲ್ಲಿ ರಿಪ್ಪರ್ ಚಂದ್ರನನ್ನು ಕಣ್ಣೂರು ಜೇಲಿನಲ್ಲಿ ನೇಣುಗಂಬಕ್ಕೆ ಏರಿಸುವಂತೆ ಮಾಡಿತ್ತು.

ಮಂಗಳೂರಿನಲ್ಲಿ ವಾಸವಾಗಿರುವ ಸಹೋದರ ಶಶಿಕಲಾ ಅವರು ಮೂರು ದಿನಗಳಿಂದ ಫೋನ್ ಮಾಡಿದರು ಬಾಲಚಂದ್ರ ಅವರು ಕರೆ ಸ್ವೀಕರಿಸಲಿಲ್ಲ ಅನುಮಾನಗೊಂಡು ಬುಧವಾರ ಸಂಜೆ ಮನೆಗೆ ಬಂದು ನೋಡಿದಾಗ ಒಳಗಿನಿಂದ ಲಾಕ್ ಆಗಿದ್ದ ಮನೆ ಒಳಗೆ ಬಾಲಚಂದ್ರ ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಇವರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ರಿಪ್ಪರ್ ಚಂದ್ರನಿಗೆ 14 ಕೊಲೆಗಳ ಆರೋಪವಿದ್ದರೂ ಆತನಿಗೆ ಮರಣದಂಡನೆ ಶಿಕ್ಷೆ ಸಿಗುವಂತೆ ಮಾಡಿದ್ದು ಇದೇ ವಾಮನ್ಜೋರು ಕೇಸ್ ಕೇರಳದಲ್ಲಿ ನಡೆದ ಕೊನೆಯ ಮರಣದಂಡನ ಶಿಕ್ಷೆ ಜುಲೈ 6 1991 ಇದೆ ಆಗಿತ್ತು ಅಂತಹ ಇತಿಹಾಸ ಪ್ರಸಿದ್ಧ ಪ್ರಕರಣದ ಹೀರೋ ಆಗಿದ್ದ ಬಾಲಚಂದ್ರ ಇಂದು ಯಾರು ಇಲ್ಲದ ವೇಳೆ ಏಕಾಂಗಿಯಾಗಿ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.

ಸದ್ಯಕ್ಕೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮನೆ ಬಾಗಿಲು ಒಳಗೆ ನಿಂದ ಲಾಕ್ ಆಗಿರುವುದರಿಂದ ಇದು ಸಹಜ ಸಾವು ಇರಬಹುದು ಎಂದು ಸಂಕಿಸಲಾಗಿದೆ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿನ ಅಸಲಿ ರಹಸ್ಯ ಹೊರಬೀಳಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article