ಮದ್ಯ ಮಾರಾಟ ನಿಷೇಧ
Wednesday, April 1, 2026
ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಏ.7 ಸಂಜೆ 5 ಗಂಟೆಯಿಂದ ಏ.9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟೆಯಿಂದ ಮೇ.4 ರ ಮಧ್ಯರಾತ್ರಿ 12 ಗಂಟೆಯ ತನಕ “ಒಣ ದಿನ”ಎಂದು ಘೋಷಿಸಿ ಈ ದಿನಗಳಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಗಡಿಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಮದ್ಯದಂಗಡಿ/ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಈ ದಿನಗಳಂದು ನಿಷೇಧಿಸಿರುವ ಪ್ರದೇಶಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.